`ಇದು ಹಿಂದೂಗಳ ಲಡಾಯಿ.. ಕವರ್ ಮಾಡ್ಬೇಡಿ…’

ಅಮೆರಿಕ ಪ್ರಥಮ ಪ್ರಜೆ ಡೊನಾಲ್ಡ್ ಟ್ರಂಪ್ ದೆಹಲಿಯಲ್ಲಿ ಇರುವಾಗಲೇ ರಾಷ್ಟ್ರ ರಾಜಧಾನಿಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಪರ-ವಿರೋಧಿ ಪ್ರತಿಭಟನಾಕಾರರ ಸಂಘರ್ಷದಲ್ಲಿ ಇಲ್ಲಿಯವರೆಗೂ 9 ಮಂದಿ ಸಾವನ್ನಪ್ಪಿ, ಹಲವರು ಗಾಯ ಗೊಂಡಿದ್ದಾರೆ.

ದೆಹಲಿಯ ಕೆಲವು ಪ್ರದೇಶಗಳಲ್ಲಿ ಪರಿಸ್ಥಿತಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಸಂಘರ್ಷದ ಸುದ್ದಿಯನ್ನು ವರದಿ ಮಾಡಲು ಹೋದ ಪತ್ರಕರ್ತರೊಬ್ಬರ ಮೇಲೆ ಪೌರತ್ವ ತಿದ್ದುಪಡಿ ಕಾಯ್ದೆ ಪರ ಹೋರಾಟಗಾರರು ದಾಳಿ ನಡೆಸಿದ್ದಾರೆ ಎಂದು ದ ಪ್ರಿಂಟ್ ವರದಿ ಮಾಡಿದೆ.

ಮೌಜ್‍ಪುರ್ ಮೆಟ್ರೋ ಸ್ಟೇಷನ್ ಬಳಿ ವರದಿ ಮಾಡಲು ಹೋಗಿದ್ದೆ. ನಾನು ಸುರಕ್ಷಿತ ಪ್ರದೇಶದಲ್ಲಿ ನಿಂತು ಸಿಎಎ ಪರ-ವಿರೋಧಿಗಳ ನಡುವಣ ಹಿಂಸಾಚಾರವನ್ನು ರಿಪೋರ್ಟ್ ಮಾಡುತ್ತಿದ್ದೆ. ಮೇಲಾಗಿ ನಾನು ಒಬ್ಬನೇ ಇರಲಿಲ್ಲ. ಈ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಸಿಎಎ ಪರ ಪ್ರತಿಭಟನಾಕಾರರ ಗುಂಪು ನನ್ನನ್ನು ಟಾರ್ಗೆಟ್ ಮಾಡಿ ಸುತ್ತುವರೆಯಿತು. ಕೈಯಲ್ಲಿ ಬಡಿಗೆ ಹಿಡಿದಿದ್ದ ಐದಾರು ಮಂದಿ ನನ್ನ ಮೇಲೆ ದಾಳಿ ಮಾಡ್ತೀವಿ ಅಂತಾ ಬೆದರಿಕೆ ಹಾಕಿದ್ರು. ನನ್ನ ಮೇಲೆ ಹಲ್ಲೆ ಮಾಡಿ ಬಿಟ್ಟುಬಿಡಿ ಎಂದು ಮನವಿ ಮಾಡಿಕೊಂಡೆ ಎಂದು ಟೈಮ್ಸ್ ನೌ ವಾಹಿನಿಯ ಹಿರಿಯ ವರದಿಗಾರ್ತಿ ಪರ್‍ವೀಣ ಪುರ್‍ಕಾಯಸ್ಥ ತಿಳಿಸಿದ್ದಾರೆ.

ನ್ಯೂಸ್ ಎಕ್ಸ್‍ನ ಹಿರಿಯ ವರದಿಗಾರ್ತಿ ಶ್ರೇಯ ಚಟರ್ಜಿಗೂ ಮೌಜ್‍ಪುರ್‍ನಲ್ಲಿ ಇದೇ ಅನುಭವ ಆಗಿದೆ. ಸಿಎಎ ಬೆಂಬಲಿಸುವ ಗುಂಪು, ಹಲ್ಲೆ ಮಾಡುವ ಬೆದರಿಕೆ ಒಡ್ಡಿದೆ.

ಇದು ಹಿಂದೂಗಳ ಲಡಾಯಿ.. ನಮ್ಮನ್ನು ಬೆಂಬಲಿಸಿ.. ಇದನ್ನು ರೆಕಾರ್ಡ್ ಮಾಡಬೇಡಿ.. ಇಲ್ಲದಿದ್ರೆ ನೀವು ತೊಂದರೆಗೆ ಸಿಲುಕುತ್ತೀರಿ ಎಂದು ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸುವ ಗುಂಪು ಧಮ್ಕಿ ಹಾಕಿತು ಎಂದು ಶ್ರೇಯ ಚಟರ್ಜಿ ಹೇಳುತ್ತಾರೆ.

ಹೌದು, ಮನೆಗಳಿಗೆ ಸಿಎಎ ಪರ ಪ್ರತಿಭಟನಾಕಾರರು ಬೆಂಕಿ ಇಡುವುದನ್ನು ನಾನು ವರದಿ ಮಾಡುತ್ತಿದ್ದೆ.. ಅಂಗಡಿಗಳನ್ನು ಧ್ವಂಸ ಮಾಡಿದರು. ಸಿಎಎ ವಿರೋಧಿ ಹೋರಾಟಗಾರರ ಮೇಲೆ ಕಲ್ಲು ತೂರತೊಡಗಿದರು.. ನಂತರವೇ ಸಿಎಎ ವಿರೋಧಿ ಹೋರಾಟಗಾರರು ಪ್ರತಿಕ್ರಿಯೆ ನೀಡಿದರು ಎಂದು ಶ್ರೇಯ ಚಟರ್ಜಿ ಟ್ವೀಟ್ ಮಾಡಿದ್ದಾರೆ.

ಪತ್ರಕರ್ತ ಆಕಾಶ್ ಎದೆ ಭಾಗಕ್ಕೆ ಗುಂಡು ಹೊಡೆಯಲಾಗಿದೆ. ಎನ್‍ಡಿ ಟಿವಿಯ ಇಬ್ಬರು ಪತ್ರಕರ್ತರಾದ ಅರವಿಂದ್ ಗುಣಶೇಖರ್, ಸೌರಭ್ ಮೇಲೆ ಹಲ್ಲೆ ಮಾಡಲಾಗಿದೆ. ವರದಿ ಮಾಡಲು ಹೋದ ಪತ್ರಕರ್ತರನ್ನು ನಿಮ್ಮದು ಯಾವ ಧರ್ಮ ಎಂದು ಕೇಳುತ್ತಿದ್ದಾರೆ. ನಾಗರಿಕರು ಭಯದಿ0ದ ಬದುಕುತ್ತಿದ್ದಾರೆ. ಇದು ಹೊಸ ಭಾರತನಾ ಎಂದು ಹಿರಿಯ ಪತ್ರಕರ್ತೆ ಶಾಂತಶ್ರೀ ಸರ್ಕಾರ್ ಪ್ರಶ್ನೆ ಮಾಡಿದ್ದಾರೆ.

ಇನ್ನು ದಾಳಿಯಲ್ಲಿ ಗಾಯಗೊಂಡ ರಾಯಿಟರ್ಸ್ ಸುದ್ದಿಸಂಸ್ಥೆಯ ವರದಿಗಾರ ದಾನೀಶ್ ಸಿದ್ದಿಖಿ ಈ ಬಗ್ಗೆ ಮಾತನಾಡಲು ನಿರಾಕರಿಸಿದ್ದಾರೆ.

LEAVE A REPLY

Please enter your comment!
Please enter your name here