ಇದು ಸಂಸಾರದ ಸಂವಿಧಾನ.. ಮರೆಯದೇ ಓದಿ..

ಒಂದು ದೇಶ ಸಂಪನ್ನವಾಗಿ.. ಸಂತೋಷದಿಂದ.. ಸಕಲ ಸೌಕರ್ಯದಿಂದ ಇರುವುದಕ್ಕೆ ಒಂದಿಷ್ಟು ನಿಯಮಗಳು, ಸೂತ್ರಗಳು ಇರಬೇಕು. ಅದನ್ನು ಹೇಳುವುದು ಸಂವಿಧಾನ. ಹಾಗೇ ನಿಮ್ಮ ಕುಟುಂಬಗಳಲ್ಲೂ ಸಂತೋಷ, ಸಂಪತ್ತು, ಸಕಲ ಸೌಕರ್ಯ ಇರಬೇಕು ಅಂದರೇ ಒಂದಿಷ್ಟು ನಿಯಮಗಳಿವೆ.. ಸೂತ್ರಗಳಿವೆ.. ಇದು ಸಂಸಾರದ ಸಂವಿಧಾನ. ಇದನ್ನು ನೀವು ಅನುಸರಿಸಿದರೇ ನಿಮ್ಮ ಕುಟುಂಬ ಸುಖಿ ಕುಟುಂಬ ಆಗುತ್ತದೆ.

ದುಂದು ವೆಚ್ಚ ಬೇಡ

ಒಂದು ರೂಪಾಯಿ ಉಳಿಸಿದರೇ.. ಆ ರೂಪಾಯಿಯನ್ನು ಗಳಿಸಿದಂತೆ.. ಹೀಗಾಗಿ ಮನೆಗೆ ಸಾಧ್ಯವಾದಷ್ಟು ದುಬಾರಿ ವಸ್ತುಗಳನ್ನು ಖರೀದಿಸಬೇಡಿ. ಹೇಳದೇ ಕೇಳದೇ ಬರುವ ತುರ್ತು ಅಗತ್ಯಗಳಿಗಾಗಿ ಮನೆಯಲ್ಲಿ ಕುಟುಂಬ ನಿಧಿ ಇರಿಸಿಕೊಳ್ಳಿ. ಪ್ರತಿ ತಿಂಗಳು ಬರುವ ಆದಾಯಕ್ಕಿಂತ ಇದು ಎರಡು ಮೂರು ಪಟ್ಟು ಹೆಚ್ಚಿರುವಂತೆ ನೋಡಿಕೊಳ್ಳಿ.

ನಿದ್ದೆ ನಂತರ ವ್ಯಾಯಾಮ ಮಾಡಿ

ಈ ಆಧುನಿಕ ಜಗತ್ತಿನಲ್ಲಿ ಕೆಲಸ ಮಾಡಲು ಹಗಲು ರಾತ್ರಿ ಎಂಬ ವ್ಯತ್ಯಾಸ ಇಲ್ಲ. ಕೆಲವರು ರಾತ್ರಿ ಪಾಳಿಗಳಲ್ಲಿ ಕೆಲಸ ಮಾಡಿ, ಹಗಲಿನಲ್ಲಿ ನಿದ್ದೆ ಮಾಡುತ್ತಾರೆ. ಅಯ್ಯೋ ಬದಲಾದ ಜೀವನ ಶೈಲಿಯಿಂದ ವರ್ಕೌಟ್ ಮಾಡಲು ನಮಗೆ ಟೈಂ ಸಿಗುತ್ತಿಲ್ಲ ಎಂದು ಕೊರಗಬೇಡಿ. ನೀವು ಯಾವಾಗ ನಿದ್ದೆಯಿಂದ ಏಳುತ್ತಿರೋ ಅದೇ ಬೆಳಗು. ಕನಿಷ್ಠ ಅರ್ಧ ಗಂಟೆ ವ್ಯಾಯಾಮಕ್ಕೆ ಮೀಸಲಿಡಿ. ಇದರಿಂದ ನೀವು ಇಡೀ ದಿನ ಉತ್ಸಾಹದಿಂದ ಇರಬಹುದು. ಆರೋಗ್ಯವೇ ಭಾಗ್ಯ.

ಮೊಬೈಲ್, ಟಿವಿಗಳನ್ನು ಪಕ್ಕಕ್ಕೆ ಇಡಿ.

ಮನೆಗೆ ಬಂದ ಕೂಡಲೇ ಮೊಬೈಲ್ ಬಳಸುವುದನ್ನು ಕಡಿಮೆ ಮಾಡಿ. ತುರ್ತು ಸಂದರ್ಭಗಳನ್ನು ಹೊರತುಪಡಿಸಿ ಬಳಸಲು ಹೋಗಬೇಡಿ. ಫೇಸ್‍ಬುಕ್, ಟ್ವಿಟ್ಟರ್, ವಾಟ್ಸಪ್ ತಂಟೆಗೆ ಹೋಗದೇ ಕುಟುಂಬದ ಜೊತೆ ಸಮಯ ಕಳೆಯಿರಿ. ನಿಮ್ಮ ಮಕ್ಕಳನ್ನು ಕೇವಲ ಪಠ್ಯಪುಸ್ತಕಗಳಿಗೆ ಸೀಮಿತ ಮಾಡದೇ ಸಂಗೀತಾ, ಸಾಹಿತ್ಯ, ಕ್ರೀಡೆಗಳಲ್ಲಿ ತೊಡಗುವಂತೆ ಮಾಡಿ. ದಿನದ ಸ್ವಲ್ಪ ಸಮಯವನ್ನು ಮಾತ್ರ (ಡಿಜಿಟಲ್ ಟೈಂ) ಟಿವಿ ನೋಡಲು, ಸೋಷಿಯಲ್ ಮೀಡಿಯಾ ಬಳಸಲು ಮೀಸಲಿಡಿ. ಸ್ಫೂರ್ತಿದಾಯಕ, ಉತ್ತಮ ಅಭಿರುಚಿಯ ಪುಸ್ತಕಗಳನ್ನು ಓದಿ, ನಿಮ್ಮ ಮಕ್ಕಳಿಗೂ ಓದಲು ಪ್ರೇರೇಪಿಸಿ.. ವಾರಾಂತ್ಯದಲ್ಲಿ ಸಿನಿಮಾಗೋ, ಎಕ್ಸಿಬಿಷನ್‍ಗೋ, ಯಾವುದಾದರೂ ಕಾರ್ಯಕ್ರಮಗಳಿಗೆ ಕುಟುಂಬ ಸಮೇತ ಹೋಗಿ. ಆರು ತಿಂಗಳಿಗೊಮ್ಮೆ ಲಾಂಗ್ ಟ್ರಿಪ್ ಹೋಗಿ.

ವಾರದಲ್ಲೊಂದು ದಿನ ಹೆಂಡತಿಯ ಮನೆ ಕೆಲಸಕ್ಕೆ ವೀಕಾಫ್ ಕೊಡಿ.

ವಾರದಲ್ಲೊಂದು ನಿಮಗೆ ಸಿಗುವ ವೀಕಾಫ್ ಅನ್ನು ಕುಟುಂಬಕ್ಕೆ ಮೀಸಲಿಡಿ. ಅದರಲ್ಲೂ, ವಾರದ ಆರು ದಿನವೂ ನಿಮಗಾಗಿ ಕಷ್ಟ ಪಡುವ ಹೆಂಡತಿಗೆ, ನಿಮಗೆ ಸಿಗುವ ವೀಕಾಫ್‍ನ್ನು ಅಂಕಿತ ಮಾಡಿ. ಅವರು ಮಾಡುವ ಕೆಲಸಗಳನ್ನು ನೀವೆ ನಿರ್ವಹಿಸಿ. ಬೆಳಗೆದ್ದ ಕೂಡಲೇ ಅವರಿಗೆ ಬೆಡ್ ಕಾಫಿ ನೀಡಿ. ಟಿಫನ್, ಊಟವನ್ನು ನೀವೆ ತಯಾರಿಸಿ ಕೊಡಿ

ತಿಂಗಳಿಗೊಂದು ಗಿಡ ನೆಟ್ಟು ಪೋಷಿಸಿ

ನೀವು ಬದುಕಿರುವುದೇ ಗಿಡಗಳಿಂದ. ಹೀಗಾಗಿ ತಿಂಗಳಿಗೊಂದು ಗಿಡ ನೆಟ್ಟು ಪೋಷಿಸುವ ಅಭ್ಯಾಸ ಬೆಳೆಸಿಕೊಳ್ಳಿ. ನಿಮ್ಮ ಮನೆಯ ವರಾಂಡ, ಮಾಳಿಗೆಯನ್ನು ಗಿಡದ ಪಾಟ್‍ಗಳಿಂದ ತುಂಬಿಸಿ. ನಿಮಗಿಷ್ಟವಾದ ಹೂ ಮತ್ತು ತರಕಾರಿಯನ್ನು ಬೆಳೆಯಿರಿ. ಮಿತವಾಗಿ ನೀರು ಬಳಸಿ.. ನಿಮ್ಮ ಮನೆಯಲ್ಲಿ ಜಾಗ ಸಾಲುತ್ತಿಲ್ಲವೇ, ನಿಮ್ಮ ಮನೆ ಸಮೀಪದ ಸರ್ಕಾರಿ ಸ್ಥಳದಲ್ಲಿ ಗಿಡ ನೆಡಲು ಶುರು ಮಾಡಿ. ನಿಮ್ಮ ಆಪ್ತರಿಗೂ ಇದನ್ನು ಹೇಳಿ..

ಗಂಡು ಹೆಣ್ಣು ಎಂಬ ಬೇಧ ಬೇಡ.. ಸಮಾನತೆ ಬೆಳೆಸಿ..

ನಿಮಗೆ ಗಂಡು, ಹೆಣ್ಣು ಮಕ್ಕಳು ಇರಬಹುದು. ಇಬ್ಬರನ್ನು ಸಮಾನವಾಗಿ ನೋಡಿ. ಹೆಣ್ಣು ಗಂಡು ಎಂಬ ಬೇಧ ಮಾಡಬೇಡಿ. ನಿಮ್ಮ ಮಕ್ಕಳಿಗೆ ಹೆಣ್ಣುಮಕ್ಕಳನ್ನು ಗೌರವದಿಂದ ನೋಡುವುದನ್ನು ಕಲಿಸಿ.

ಶೇರ್ ಮಾಡಿ

LEAVE A REPLY

Please enter your comment!
Please enter your name here