ಇದು ರಾಜಕಾರಣದಾಚೆ ರಾಜಕಾರಣಿಗಳ ಮುಖ.. ಅಪರೂಪದ ಸಮ್ಮಿಲನ..

ಒಂದು ವೇದಿಕೆ.. ನಾಲ್ವರು ಮಾಜಿ ಮುಖ್ಯಮಂತ್ರಿಗಳ ಜೊತೆ ಮುಖ್ಯಮಂತ್ರಿ ಯಡಿಯೂರಪ್ಪ.. ಅಕ್ಕ ಪಕ್ಕ ಕುಳಿತು ಕೇಂದ್ರ ಸಚಿವ ರಾಜನಾಥ್ ಸಿಂಗ್, ಸಿದ್ದರಾಮಯ್ಯ ಮಾತುಗಾರಿಕೆ… ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್, ಸಿದ್ದರಾಮಯ್ಯ ನಡುವೆ ನಗು ವಿನಿಮಯ.. ಸೈದ್ಧಾಂತಿಕ ವಿರೋಧಿಗಳ ಹಸ್ತಲಾಘವ.. ಗತದಲ್ಲಿ ಒಂದೇ ದೋಣಿಯ ಪಯಣಿಗರಾಗಿದ್ದ ಎಸ್‍ಎಂ ಕೃಷ್ಣ ಮತ್ತು ಸಿದ್ದರಾಮಯ್ಯ ನಡುವೆ ಶುಭಾಶಯಗಳ ವಿನಿಮಯ.. ಬಹುತೇಕರೇ ಬಿಜೆಪಿಯವರೇ ತುಂಬಿದ್ದ ಸಭೆಯಲ್ಲಿ ಸಿದ್ದರಾಮಯ್ಯ ಸೆಲ್ಫಿಗೆ ಬೇಡಿಕೆ.. ಸಿದ್ದರಾಮಯ್ಯ ಭಾಷಣಕ್ಕೆ ನಿಂತ ಕೂಡಲೇ ಮುಗಿಮುಟ್ಟಿದ ಹರ್ಷೋದ್ಘಾರ… ಹೌದೋ ಹುಲಿಯಾ ಘೋಷಣೆ..

ಹೌದು ಇದು ರಾಜಕಾರಣದಾಚೆಯ ರಾಜಕಾರಣಿಗಳ ಮುಖ.. ಇಂತಹ ಅಪರೂಪದ ಸಮ್ಮಿಲನಕ್ಕೆ ಸಾಕ್ಷಿ ಆಗಿದ್ದು ಮುಖ್ಯಮಂತ್ರಿ ಯಡಿಯೂರಪ್ಪ ಜನ್ಮದಿನ ಪ್ರಯುಕ್ತ ನಡೆದ ಅಭಿನಂದನಾ ಸಮಾರಂಭ..

ರಾಜಕಾರಣದ ಅಖಾಡದಲ್ಲಿ ಪರಸ್ಪರ ವಾಕ್ಸಮರ ನಡೆಸುವ ರಾಜಕಾರಣಿಗಳು ಇವತ್ತು ಅಪರೂಪಕ್ಕೆ ಎಂಬಂತೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಎಸ್‍ಎಂ ಕೃಷ್ಣ, ಸಿದ್ದರಾಮಯ್ಯ, ಜಗದೀಶ್ ಶೆಟ್ಟರ್, ಸದಾನಂದಗೌಡ, ಕೇಂದ್ರ ಸಚಿವ ರಾಜನಾಥ್ ಸಿಂಗ್, ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಒಂದೆಡೆ ಸೇರಿ ಸಂಭ್ರಮಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ 1983ರಲ್ಲಿ ವಿಧಾನಸಭೆಗೆ ಕಾಲಿಟ್ಟವರು. ಯಡಿಯೂರಪ್ಪ ನಾಲ್ಕು ಬಾರಿ ಮುಖ್ಯಮಂತ್ರಿ ಆದರೆ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಪೂರೈಸಿದವರು.. ಯಡಿಯೂರಪ್ಪನವರ ಹೋರಾಟದ ಹಾದಿಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಲುಕು ಹಾಕಿದರು. ವಿಶೇಷವಾಗಿ ಸಿದ್ದರಾಮಯ್ಯ ಆಗಮನದ ಬಗ್ಗೆ ಕೇಂದ್ರ ಸಚಿವ ರಾಜನಾಥ್ ಸಿಂಗ್, ಎಸ್‍ಎಂ ಕೃಷ್ಣ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವದ ಸೊಗಡು ಇದೇ ಅಲ್ಲವೇ..

LEAVE A REPLY

Please enter your comment!
Please enter your name here