ಇದು ಜಗತ್ತಿನ ದುಬಾರಿ ಸುಪಾರಿ… ಟ್ರಂಪ್ ತಲೆ ತಂದ್ರೆ 570 ಕೋಟಿ

ಇರಾನ್ ಖಡ್ಸ್ ಫೋರ್ಸ್ ಅಧಿಪತಿ ಖಾಸೀಂ ಸೋಲೆಮಾನ್ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ತೈಲ ಸಂಪತ್ಭರಿತ ದೇಶ ಇರಾನ್ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ತಲೆ ಕಡಿದು ತಂದವರಿಗೆ ಬರೋಬ್ಬರಿ 570 ಕೋಟಿ ಬಹುಮಾನ ನೀಡುವುದಾಗಿ ಇರಾನ್ ಘೋಷಿಸಿದೆ.

ತಲೆಗೊಂದು ಡಾಲರ್‍ನಂತೆ ಇರಾನ್ ದೇಶದ ಎಲ್ಲಾ ಜನತೆ ನೀಡಲಿದ್ದು, ಈ ಹಣವನ್ನು ಟ್ರಂಪ್ ಪ್ರಾಣ ತೆಗೆದವರಿಗೆ ರಿವಾರ್ಡ್ ರೂಪದಲ್ಲಿ ನೀಡುವುದಾಗಿ ತಿಳಿಸಿದೆ. ಇರಾನ್ ದೇಶದ ಜನಸಂಖ್ಯೆ 80 ಲಕ್ಷ. ನಮ್ಮ ದೇಶದ ಜನಸಂಖ್ಯೆಗೆ ಅನುಗುಣವಾಗಿ ಟ್ರಂಪ್ ತಲೆ ಕಡಿದು ತಂದವರಿಗೆ ಈ ಬಹುಮಾನ ಘೋಷಣೆ ಮಾಡಲಾಗಿದೆ ಎಂದು ಇರಾನ್ ಟಿವಿ ಹೇಳಿಕೊಂಡಿದೆ.

ಇರಾಕ್ ರಾಜಧಾನಿ ಬಾಗ್ದಾದ್ ಏರ್‍ಪೋರ್ಟ್ ಮೇಲೆ ಶುಕ್ರವಾರ ಅಮೆರಿಕಾ ಪಡೆಗಳು ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್ ಟಾಪ್ ಕಮಾಂಡರ್, ಕಡ್ಸ್ ಫೋರ್ಸ್ ಅಧಿಪತಿ ಜನೆರಲ್ ಖಾಸಿಂ ಸೋಲೇಮಾನ್, ಇರಾಕ್ ಮಿಲಿಷಿಯಾ ಕಮಾಂಡರ್ ಅಬು ಮಹದಿ ಸಾವನ್ನಪ್ಪಿದ್ದರು. ಈ ಬೆನ್ನಲ್ಲೇ ಇರಾನ್ ಮತ್ತು ಅಮೆರಿಕ ನಡುವೆ ಕದನ ಭೀತಿ ಆವರಿಸಿದೆ.

LEAVE A REPLY

Please enter your comment!
Please enter your name here