ಇಂದಿನ ಶಿವಾಜಿಯಂತೆ ಮೋದಿ..! ಚಮಚಾಗಿರಿ ಎಂದ ಶಿವಸೇನೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಶಿವಾಜಿ ಮಹಾರಾಜರಿಗೆ ಹೋಲಿಸುವ ಕೃತಿಯೊಂದು ಇದೀಗ ಮಹಾರಾಷ್ಟ್ರದಲ್ಲಿ ಬಿರುಗಾಳಿ ಎಬ್ಬಿಸಿದೆ. ಬಿಜೆಪಿ ವಿರುದ್ಧ ಶಿವಸೇನೆ, ಎನ್‍ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳು ಒಗ್ಗೂಡಿ ಮುಗಿಬಿದ್ದಿವೆ.

ಆಜ್ ಕೆ ಶಿವಾಜಿ; ನರೇಂದ್ರ ಮೋದಿ ಎಂಬ ಕೃತಿಯನ್ನು ಬಿಜೆಪಿಯ ನಾಯಕ ಜಯ್ ಭಗವಾನ್ ಗೋಯೆಲ್ ಎಂಬುವರು ಬರೆದಿದ್ದು, ಅದು ದೆಹಲಿ ಬಿಜೆಪಿ ಆಯೋಜಿಸಿದ್ದ ಧಾರ್ಮಿಕ ಮತ್ತು ಸಂಸ್ಕøತಿಕ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಕೃತಿಯೀಗ ವಿವಾದದ ಬಿಡುಗಾಳಿ ಎಬ್ಬಿಸಿದೆ.

ಇದು ಚಮಚಾಗಿರಿ ಅಲ್ಲದೇ ಮತ್ತೇನು ಅಲ್ಲ. ಶಿವಾಜಿ ಮಹಾರಾಜ ಎಲ್ಲಿ.. ಈ ಪ್ರಧಾನಿ ನರೇಂದ್ರ ಮೋದಿ. ಶಿವಾಜಿ ಮಹಾರಾಜರಿಗೆ ಮೋದಿಯನ್ನು ಹೋಲಿಕೆ ಮಾಡಿರುವುದು ಸರಿಯಲ್ಲ ಎಂದು ಶಿವಸೇನೆ ಮುಖಂಡ ಸಂಜಯ್ ರೌತ್ ವಾಗ್ದಾಳಿ ನಡೆಸಿದ್ದಾರೆ.

ಇದನ್ನು ನೋಡಿಕೊಂದು ಕೂಡ ಶಿವಾಜಿ ವಂಶಸ್ಥರು ಬಿಜೆಪಿಯಲ್ಲಿರುವುದು ಸರಿಯಲ್ಲ. ಬಿಜೆಪಿಯ ರಾಜ್ಯಸಭಾ ಸದಸ್ಯರು ಆಗಿರುವ ಶಿವಾಜಿ ವಂಶಸ್ಥ ಸಂಭಾಜಿ ರಾಜೆ ಈ ಬಗ್ಗೆ ಸ್ಪಷ್ಟನೆ ಕೊಡಬೇಕು ಎಂದು ಸಂಜಯ್ ರೌತ್ ಆಗ್ರಹಿಸಿದ್ದಾರೆ.

ಈ ಬೆನ್ನಲ್ಲೇ ಆಜ್ ಕೆ ಶಿವಾಜಿ; ನರೇಂದ್ರ ಮೋದಿ ಕೃತಿಯನ್ನು ಬ್ಯಾನ್ ಮಾಡುವಂತೆ ಶಿವಾಜಿ ವಂಶಸ್ಥರಾದ ಸಂಭಾಜಿ ರಾಜೆಯವರು ಕೇಂದ್ರ ಗೃಹ ಸಚಿವ ಅಮಿತ್ ಷಾರನ್ನು ಒತ್ತಾಯಿಸಿದ್ದಾರೆ. ನಾವು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಗೌರವಿಸುತ್ತೇವೆ. ಆದರೆ, ಅವರು ಸೇರಿ ಜಗತ್ತಿನ ಯಾರನ್ನೂ ಶಿವಾಜಿ ಮಹಾರಾಜರಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಮಹಾರಾಷ್ಟ್ರ ಕಾಂಗ್ರೆಸ್ ವಕ್ತಾರ ಅತುಲ್ ಲೋಂಡೇ, ಕೃತಿ ಮತ್ತು ಕೃತಿಕಾರನ ವಿರುದ್ಧ ನಾಗ್ಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದು ಮಹಾರಾಷ್ಟ್ರ ಜನರ ಭಾವನೆಗಳಿಗೆ ಧಕ್ಕೆ ತಂದಿದೆ. ಕೂಡಲೇ ಈ ಕೃತಿಯನ್ನು ಬ್ಯಾನ್ ಮಾಡಿ ಎಂದು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here