ಆ್ಯಕ್ಷನ್ ಪ್ರಿನ್ಸ್ ಧ್ರುವ ಮತ್ತು ಪ್ರೇರಣಾ ಮದುವೆ ಸಂಭ್ರಮ

ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತನ್ನ ಬಹುಕಾಲದ ಗೆಳತಿ ಪ್ರೇರಣಾ ಶಂಕರ್ ಜೊತೆ  ನಿನ್ನೆ ವಿವಾಹ ಜೀವನಕ್ಕೆ ಕಾಲಿಟ್ಟರು.

ಪ್ರೇರಣಾ ಮನೆಯಲ್ಲಿ ಮೆಹಂದಿ ಕಾರ್ಯಕ್ರಮ ನೆರವೇರಿದ್ದು, ಧ್ರುವ ಸರ್ಜಾ, ಮೇಘನಾ ರಾಜ್, ಚಿರಂಜೀವಿ ಸರ್ಜಾ ಸೇರಿದಂತೆ ಕುಟುಂಬದವರು ಪಾಲ್ಗೊಂಡಿದ್ದರು.ಧ್ರುವ ಮನೆಯಲ್ಲಿ ಚಪ್ಪರ ಶಾಸ್ತ್ರ ನಡೆದಿದ್ದು, ಧ್ರುವ ಅವರ ಮನೆಯ ರಸ್ತೆಯುದ್ದಕ್ಕೂ ತೆಂಗಿನ ಗರಿ ಚಪ್ಪರ ಹಾಕಲಾಗಿತ್ತು.

 

ಬೆಂಗಳೂರಿನ ಜೆ.ಪಿ. ನಗರ 7ನೇ ಫೇಸ್​ನಲ್ಲಿರುವ ಸಂಸ್ಕೃತಿ ಬೃಂದಾವನ ಕನ್ವೆನ್ಷನ್ ಹಾಲ್​ನಲ್ಲಿ ಧ್ರುವ ಸರ್ಜಾ- ಪ್ರೇರಣಾ ಶಂಕರ್ ಮದುವೆ ನಡೆಯಿತು. ಚಿತ್ರರಂಗದ ಗ‍ಣ್ಯರು, ಸ್ನೇಹಿತರಿಗಾಗಿ ಅದ್ಧೂರಿ ರಿಸೆಪ್ಷನ್ ಆಯೋಜಿಸಿದ್ದರು.

ನಟ ಧ್ರುವ ಸರ್ಜಾ ಆಂಜನೇಯನ ಭಕ್ತ ಆಗಿರುವುದರಿಂದ ವೇದಿಕೆ ಮಧ್ಯಭಾಗದಲ್ಲಿ ವಾಯುಪುತ್ರ ಆಂಜನೇಯ ಮೂರ್ತಿ ಸ್ಥಾಪನೆ ಮಾಡಲಾಗಿದೆ.

ರಿಸೆಪ್ಷನ್ ನಲ್ಲಿ ವಧು ಪ್ರೇರಣಾ ಸಬ್ಯಸಾಚಿ ವೆಡ್ಡಿಂಗ್ ಕಲೆಕ್ಷನ್ ಬಾಟಲ್ ಗ್ರೀನ್ ಲೆಹೆಂಗಾದಲ್ಲಿ ಮಿಂಚುತ್ತಿದ್ದರು. ವರ ಧ್ರುವ ಸರ್ಜಾ ಇಟಲಿಯಿಂದ ತರಲಾಗಿರುವ ವೆಸ್ಟ್ ಕೋಟ್ ಮತ್ತು ಬ್ಲೇಸರ್ ಧರಿಸಿದ್ದರು.

ಧ್ರುವ-ಪ್ರೇರಣಾ ರಿಸೆಪ್ಷನ್ ಗೆ ಸ್ಯಾಂಡಲ್ ವುಡ್ ತಾರೆಯರು ಅನೇಕರು ಆಗಮಿಸಿ ಶುಭ ಕೋರಿದ್ದಾರೆ. ಕಿಚ್ಚ ಸುದೀಪ್, ಪುನೀತ್ ರಾಜ್ ಕುಮಾರ್, ಡಾ.ಶಿವರಾಜ್ ಕುಮಾರ್,ರಾಕಿಂಗ್ ಸ್ಟಾರ್ ಯಶ್,ಸುಮಲತ ಅಂಬರೀಶ್ ಮುಂತಾದ ಗಣ್ಯರು ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಕೋರಿದ್ದರು. ಈ ಕ್ಷಣಗಳ ಕೆಲವು ಫೋಟೋಗಳು ಇಲ್ಲಿವೆ

 

 

 

 

 

 

 

LEAVE A REPLY

Please enter your comment!
Please enter your name here