ಆಹಾರದ ಕಿಟ್‌ ಬೇಕಾದರೆ ಬನ್ನಿ ಎಂದ ಬಿಜೆಪಿಯ ನಕಲಿ ಹಿಂದೂ ಮುಖವಾಡ ಬಯಲು-ಕಾಂಗ್ರೆಸ್‌ ಕಿಡಿ

ಪ್ರಾತಿನಿಧಿಕ ಚಿತ್ರ

ಆಹಾರದ ಕಿಟ್ ಬೇಕಾದರೆ ಬರುವಂತೆ ದೇವಸ್ಥಾನಗಳ ಅರ್ಚಕರಿಗೆ ಜನಪ್ರತಿನಿಧಿಗಳು ಹೇಳಿರುವುದು ಬೇಸರ ತಂದಿದೆ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಾಕ್‌ ಡೌನ್ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಎಲ್ಲಾ ಗ್ರಾಮದ ಅರ್ಚಕರುಗಳನ್ನು ಕಿಟ್ ನೀಡಲು ಕಾರ್ಕಳಕ್ಕೆ ಕರೆಯಲಾಗಿತ್ತು. ವಾಹನ ಸೌಲಭ್ಯಗಳಿಲ್ಲದ ಸಮಯದಲ್ಲಿ ತೀರಾ ಹಳ್ಳಿ ಪ್ರದೇಶಗಳಿಂದ ಅರ್ಚಕರನ್ನು ನಗರಕ್ಕೆ ಕರೆದಿರುವುದು ಜನಪ್ರತಿನಿಧಿಗಳು ಅಧಿಕಾರದ ದುರುಪಯೋಗ ಮಾಡಿದಂತೆ ಎಂದು ಅವರು ಆರೋಪಿಸಿದ್ದಾರೆ.

ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರಧಾನ ಪಾತ್ರ ವಹಿಸುವ ಅರ್ಚಕರನ್ನು ಹಿಂದುತ್ವ ಪ್ರತಿಪಾದಿಸುವ ಜನಪ್ರತಿನಿಧಿಗಳು ಕಾರ್ಕಳಕ್ಕೆ ಬಂದು ಆಹಾರ ಕಿಟ್ ಕೊಂಡೊಯ್ಯಿರಿ ಎಂಬ ಸಂದೇಶ ನೀಡಿರುವುದು ಬಹಳ ಖೇದಕರ ಎಂದು ಅವರು ಖಂಡಿಸಿದ್ದಾರೆ. ಈ ರೀತಿಯ ನಕಲಿ ಹಿಂದುತ್ವದ ಮುಖವಾಡವನ್ನು ಬಯಲಿಗೆಳೆಯಲು ಯುವಕಾಂಗ್ರೆಸ್ ನಿರಂತರವಾಗಿ ಶ್ರಮಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

 

LEAVE A REPLY

Please enter your comment!
Please enter your name here