ಕ್ರಿಕೆಟ್ ಲೋಕಕ್ಕೆ ಲಗ್ಗೆ ಇಟ್ಟ ಸಾಮಾಜಿಕ ಜಾಲತಾಣಗಳು ಕ್ರಿಕೆಟ್ ಪ್ರಿಯರ ಮನಗೆದ್ದಿವೆ. ಅದೆಷ್ಟೋ ಹಿಂಬಾಲಕರನ್ನು ಹೊಂದಿದ ಕ್ರಿಕೆಟ್ ಜಾಲತಾಣಗಳು ಮೈದಾನದಲ್ಲಿ ಮಾತ್ರ ಅಲ್ಲ ಅಂತರ್ಜಾಲದ ಮೂಲಕ ಪ್ರತಿಯೊಬ್ಬರ ಮನೆಗೂ ಕ್ರಿಕೆಟ್ ಆಟಗಾರರನ್ನು ಇನ್ನಷ್ಟು ಹತ್ತಿರದಿಂದ ಪರಿಚಯಿಸುತ್ತಿದೆ.
ಹೀಗೆ ಇರುವಾಗ ದಿಢೀರನೇ ಜಾಲತಾಣದಲ್ಲಿನ ಅಕೌಂಟ್ ಗಳೇ ಡಿಲೀಟ್ ಆಗಿಬಿಟ್ಟರೆ ಹೇಗೆ?
ಹೌದು ನಮ್ಮ ನೆಚ್ಚಿನ ಆರ್’ಸಿಬಿ ತಂಡದ ಟ್ವಿಟರ್, ಫೇಸ್’ಬುಕ್, ಇನ್’ಸ್ಟಾಗ್ರಾಮ್ ಸೇರಿದಂತೆ ಎಲ್ಲಾ ಜಾಲತಾಣಗಳೂ ಇಂದು ದಿಢೀರನೇ ಡಿಲೀಟ್ ಆಗಿವೆ.
ಅವರ ಅಕೌಂಟ್ ಗಳಿಂದ ಪ್ರಕಟವಾದ ಎಲ್ಲಾ ಪೋಸ್ಟ್ ಗಳೂ ಕೂಡಾ ಡಿಲೀಟ್ ಆಗಿದ್ದು ಪ್ರೊಫೈಲ್ ಫೋಟೋದಲ್ಲಿದ್ದ ಲೋಗೋ ಕೂಡಾ ಓಪನ್ ಆಗದೇ ಇರುವುದು ಹಿಂಬಾಲಕರಿಗೆ ಅಚ್ಚರಿ ನೀಡಿದೆ.
ಇದರೊಂದಿಗೆ ಏನಾದರೂ ಲೋಗೋ ಬದಲಿಸುತ್ತಿದ್ದಾರೆಯೇ? ಅಥವಾ ಯಾರಾದರೂ ಹ್ಯಾಕ್ ಮಾಡಿದ್ದಾರೆಯೇ? ಬೇರೆ ಇನ್ನೇನಾದರೂ ಸಮಸ್ಯೆ ಆಗಿದೆಯೇ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ.
ಅದೇನೇ ಆದರೂ ಈ ರೀತಿ ದಿಢೀರನೆ ನಡೆದ ಘಟನೆ ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಎಲ್ಲಾ ಊಹಾಪೋಹಗಳಿಗೆ ಆರ್’ಸಿಬಿ ನವರೇ ಉತ್ತರಿಸಬೇಕಿದೆ.