ಆರ್ಥಿಕ ಸ್ವಾವಲಂಬನೆಗೆ ಮೋದಿ ಲೋಕಲ್ ಮಂತ್ರ

ಕೊರೋನಾ ವೈರಸ್ ಇಡೀ ಜಗತ್ತಿನ ರೂಪುರೇಖೆಗಳನ್ನು ಬದಲಿಸಿದೆ.. ಗ್ಲೋಬಲ್ ವಿಲೇಜ್ ಎಂಬ ಸಿದ್ದಾಂತಕ್ಕೆ ತಿಲಾಂಜಲಿ ಇಡುತ್ತಿದೆ.. ಇಂತಹ ಸಂದರ್ಭದಲ್ಲಿ ಆರ್ಥಿಕ ಸ್ವಾವಲಂಬನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಲೋಕಲ್ ಮಂತ್ರ ಪಠಿಸಿದ್ದಾರೆ.

ದೇಶವನ್ನು ಉದ್ದೇಶಿಸಿ ರಾಷ್ಟ್ರೀಯ ಭಾಷಣ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಸ್ಥಳೀಯತೆಯಿಂದಲೇ ನಾವಿಂದು ಉಳಿದಿದ್ದೇವೆ. ಸ್ಥಳೀಯ ಉತ್ಪಾದನೆ, ಸ್ಥಳೀಯ ಮಾರುಕಟ್ಟೆ, ಸ್ಥಳೀಯ ಪೂರೈಕೆಯ ಚೈನ್ ಸಿಸ್ಟಮ್‍ಗೆ ಒತ್ತು ನೀಡಬೇಕಿದೆ.

ಲೋಕಲ್ ಮಂತ್ರವನ್ನು ನಮ್ಮ ಜೀವನದ ಒಂದು ಭಾಗ ಮಾಡಿಕೊಳ್ಳಬೇಕು.. ಗ್ಲೋಬಲ್ ಬ್ರಾಂಡ್‍ಗಳು ಕೂಡ ಕೆಲವೊಮ್ಮೆ ಲೋಕಲ್ ಬ್ರಾಂಡ್ ಆಗುತ್ತೆ.. ಲೋಕಲ್ ಬ್ರಾಂಡ್ ಈಗ ಗ್ಲೋಬಲ್ ಬ್ರಾಂಡ್ ಆಗಬೇಕು. ನಮ್ಮ ಸ್ಥಳೀಯ ವಸ್ತುಗಳನ್ನೇ ಬಳಸಿ ನಾವು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದರು.

LEAVE A REPLY

Please enter your comment!
Please enter your name here