ಆರೋಗ್ಯ ಸೇತು ಆ್ಯಪ್ ಹ್ಯಾಕ್‌ ಮಾಡಿದ್ದಾರಂತೆ ಬೆಂಗಳೂರಿನ ಟೆಕ್ಕಿ..!

ಕೊರೊನಾ ವೈರಸ್ ಸೋಂಕಿತರ ನಿಗಾ ವಹಿಸುವ ಹಾಗೂ ಆರೋಗ್ಯವಂತರಿಗೆ ಈ ಬಗ್ಗೆ ಎಚ್ಚರಿಕೆ ನೀಡುವ ಆರೋಗ್ಯ ಸೇತು ಆ್ಯಪ್ ಮೂಲಕ ವ್ಯಕ್ತಿಯ ವೈಯಕ್ತಿಕ ಮಾಹಿತಿಗಳು ಸೋರಿಕೆಯಾಗುತ್ತಿವೆ ಎಂಬ ಸಂಶಯ ಶುರುವಾಗಿತ್ತು.

ಈ ಬಗ್ಗೆ ಹ್ಯಾಕರ್ಸ್ ಗುಂಪೊಂದು ನೀಡಿರುವ ಹೇಳಿಕೆಯನ್ನು ಕೇಂದ್ರ ಸರ್ಕಾರ ಅಲ್ಲಗೆಳೆದಿತ್ತು, ಹಾಗೂ ಆರೋಗ್ಯ ಸೇತು ಆ್ಯಪ್ ನಲ್ಲಿ ಯಾವುದೇ ಭದ್ರತಾ ಲೋಪವಿಲ್ಲ ಎಂದು ಸ್ಪಷ್ಟಪಡಿಸಿತ್ತು.

ಆದರೆ ಇದೀಗ ಬೆಂಗಳೂರು ಮೂಲದ ಹ್ಯಾಕರೊಬ್ಬರು ಆರೋಗ್ಯ ಸೇತು ಆ್ಯಪ್ ನ್ನು ಮಾಡಿದ್ದೇನೆ ಎಂದಿದ್ದಾರೆ. ಈ ಆ್ಯಪ್ ಡೌನ್ಲೋಡ್ ಮಾಡುವಂತೆ ಬಲಪಡಿಸುವುದು ಹಾಗೂ ಸರ್ಕಾರದಿಂದ ದಿನದ 24 ಗಂಟೆಯೂ ಕಣ್ಗಾವಲು ಇಡುವುದು ತನಗೆ ಸರಿ ಕಂಡಿರಲಿಲ್ಲ ಹಾಗಾಗಿ ಈ ರೀತಿ ಮಾಡಬೇಕಾಯಿತು ಎಂದಿದ್ದಾರೆ. ಈ ಬಗ್ಗೆ ಇಂಗ್ಲೀಷ್‌ ವೆಬ್‌ಸೈಟ್‌ವೊಂದು ವರದಿ ಮಾಡಿದೆ.

ಈ ಅಪ್ಲಿಕೇಶನನ್ನು ಹ್ಯಾಕ್ ಮಾಡಿದ ನಂತರ ಅವರು ಮಾಹಿತಿ ತುಂಬಿಸಬೇಕಾದ ಎಲ್ಲಾ ಪ್ರಕ್ರಿಯೆಗಳನ್ನು ತಪ್ಪಿಸಿಕೊಂಡು ನಂತರ ತಮ್ಮ ವೈಯಕ್ತಿಕ ಮಾಹಿತಿಗಳನ್ನು ಹೆಸರು, ವಯಸ್ಸು, ಲಿಂಗ, ಪ್ರಯಾಣ ಹಿಸ್ಟರಿ ಹಾಗೂ ಕೋವಿಡ್ 19ರ ಲಕ್ಷಣಗಳ ಕುರಿತು ಮಾಹಿತಿ ನೀಡಬೇಕಾದ ಸಂದರ್ಭದಲ್ಲಿಯೂ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು.‌

ಫೋನ್‌ನ ಬ್ಲೂಟೂತ್ ಹಾಗೂ ಜಿಪಿಎಸ್ ಬಳಸಲು ಅನುಮತಿ ಪಡೆಯುವ ಮನವಿಗಳನ್ನು ಅವರು ತಪ್ಪಿಸುವಲ್ಲಿ ಯಶಸ್ವಿಯಾದರು. ಇಷ್ಟು ಹಂತಗಳನ್ನು ದಾಟಿದ ನಂತರ ಇವರ ಆರೋಗ್ಯ ಸೇತು ಆ್ಯಪ್ ನಲ್ಲಿ ಇದೀಗ ಗ್ರೀನ್ ಬ್ಯಾಚ್ ಕಾಣಿಸಿಕೊಂಡಿದೆ ಹಾಗೂ ಅವರು ಕೋವಿಡ್ 19ರಿಂದ ನಿಂದ ಸುರಕ್ಷಿತವಾಗಿದ್ದಾರೆ ಎಂದು ದೃಢೀಕರಿಸಿದೆ.

ಅಚ್ಚರಿಯ ಸಂಗತಿಯೆಂದರೆ ಈ ಆ್ಯಪ್ ಅಳವಡಿಸಬೇಕಾದ ಸಂದರ್ಭದಲ್ಲಿ ಅನುಸರಿಸಬೇಕಾದ ಪ್ರಕ್ರಿಯೆಗಳನ್ನು ಅವರು ಇಲ್ಲಿ ಪಾಲಿಸಿಲ್ಲವಂತೆ.

LEAVE A REPLY

Please enter your comment!
Please enter your name here