ಆರೋಗ್ಯ ಮಂತ್ರಿಗೆ ಕೊರೋನಾ ವೈರಸ್…

ಇಡೀ ಜಗತ್ತನ್ನು ವಿಸ್ತರಿಸಿರುವ ಕೊರೋನಾ ವೈರಸ್ ಕೇವಲ ಸಾಮಾನ್ಯರನ್ನಷ್ಟೇ ಕಾಡುತ್ತಿಲ್ಲ. ವಿವಿಐಪಿಗಳಿಗೂ ಕಂಟಕ ಆಗ್ತಿದೆ. ಈಗಾಗಲೇ ಇರಾನ್ ದೇಶದ ಮಂತ್ರಿಗಳು, ಸಂಸದರಿಗೆ ಸೋಕಿರುವ ಕೊರೋನಾ ವೈರಸ್, ಈಗ ಬ್ರಿಟನ್ ಆರೋಗ್ಯ ಮಂತ್ರಿ ನಾಡಿನ್ ಡೋರಿಸ್‍ಗೂ ಸೋಕಿದೆ. ಈ ವಿಚಾರವನ್ನು ಅವರು ಸ್ವಯಂ ಹೇಳಿಕೊಂಡಿದ್ದಾರೆ.

ಕಳೆದ ವಾರ ಕೊರೋನಾ ನಿಯಂತ್ರಣ ಸಂಬಂಧಿ ಕಡತಕ್ಕೆ ಸಹಿ ಹಾಕುವ ಸಂದರ್ಭದಲ್ಲಿ ಡೋರೀಸ್ ಮೊದಲ ಬಾರಿಗೆ ಅಸ್ವಸ್ಥರಾಗಿದ್ದರು. ನಂತರ ಡೋರೀಸ್ ಬ್ರಿಟನ್ ಪ್ರಧಾನಿ ಬೋರೀಸ್ ಜಾನ್ಸನ್ ಸೇರಿ ಹಲವರನ್ನು ಭೇಟಿ ಮಾಡಿದ್ದರು. ಹೀಗಾಗಿ ಈಗ ಬ್ರಿಟನ್ ಸರ್ಕಾರದ ಎಲ್ಲರಿಗೂ ಕೊರೋನಾ ಭೀತಿ ಎದುರಾಗಿದೆ.

ಇದುವರೆಗೂ ಬ್ರಿಟನ್‍ನಲ್ಲಿ ಕೊರೋನಾಗೆ ಆರು ಮಂದಿ ಬಲಿ ಆಗಿದ್ದಾರೆ. 373 ಮಂದಿಗೆ ಸೋಂಕು ತಗುಲಿದೆ.

LEAVE A REPLY

Please enter your comment!
Please enter your name here