ಆರೆಂಜ್‌ಝೋನ್‌ನಲ್ಲಿ ಇವೆಲ್ಲ ಇರುತ್ತವೆ – ಇಲ್ಲಿದೆ ಕಂಪ್ಲೀಟ್‌ ಮಾಹಿತಿ

ಕೊರೋನಾ ತಡೆ ಮತ್ತು ಆರ್ಥಿಕ ಚಟುವಟಿಕೆಗೆ ಅವಕಾಶ ಮಾಡಿಕೊಡಬೇಕೆಂಬ ಎರಡು ಉದ್ದೇಶಕ್ಕಾಗಿ ಕೇಂದ್ರ ಸರ್ಕಾರ ಕೊರೋನಾ ಸಂಖ್ಯೆ ಆಧರಿಸಿ ಜಿಲ್ಲೆಗಳಲ್ಲಿ ರೆಡ್‌ ಝೋನ್‌, ಆರೆಂಜ್‌ಝೋನ್‌ ಮತ್ತು ಗ್ರೀನ್‌ಝೋನ್‌ಗಳಾಗಿ ವಿಂಗಡಿಸಿದೆ.

ಹಾಗಾದ್ರೆ ಆರೆಂಜ್‌ಝೋನ್‌ನಲ್ಲಿ ಏನಿರುತ್ತೆ..? ಏನಿರಲ್ಲ ಎನ್ನುವುದು ವಿವರವಾಗಿ ಹೇಳ್ತೀವಿ. ಅಂದಹಾಗೆ ರೆಡ್‌ಝೋನ್‌ ಜಿಲ್ಲೆಗಳಲ್ಲಿ ಕಂಟೈನ್‌ಮೆಂಟ್‌ಝೋನ್‌ಗಳ ಹೊರಗೆ ಆರ್ಥಿಕ ಚಟುವಟಿಕೆಗೆ ಅನುಮತಿ ನೀಡಲಾಗಿದೆ.

೧) ಆರೆಂಜ್‌ಝೋನ್‌ ಜಿಲ್ಲೆಗಳ ಒಳಗೆ ಮತ್ತು ಇತರೆ ಜಿಲ್ಲೆಗಳ ನಡುವೆ ವಾಹನ ಸಂಚಾರ ನಿರ್ಬಂಧ

೨) ಟ್ಯಾಕ್ಸಿ ಮತ್ತು ಕ್ಯಾಬ್‌ ಓಡಾಡಬಹುದು – ಓರ್ವ ಡ್ರೈವರ್‌ ಮತ್ತು ಇಬ್ಬರು ಪ್ರಯಾಣಿಕರು (ಒಟ್ಟು ಮೂರು ಜನ)

೩) ಅನುಮತಿ ನೀಡಲಾದ ಚಟುವಟಿಕೆಗಳಿಷ್ಟೇ ಜಿಲ್ಲೆಗಳ ನಡುವೆ ವಾಹನಗಳು ಮತ್ತು ಜನರು ಸಂಚರಿಸಬಹುದು. ಆದ್ರೆ ಕಾರು, ಕ್ಯಾಬ್‌, ಜೀಪ್‌ಗಳಲ್ಲಿ ಡ್ರೈವರ್‌ ಬಿಟ್ಟು ಇಬ್ಬರಷ್ಟೇ ಪ್ರಯಾಣಿಸಬಹುದು.

೪) ವಿಶೇಷ ಆರ್ಥಿಕ ವಲಯ, ಇಂಡಸ್ಟ್ರೀಯಲ್‌ ಎಸ್ಟೇಟ್‌, ಇಂಡಸ್ಟ್ರೀಯಲ್‌ ಟೌನ್‌, ಇಂಡಸ್ಟ್ರೀಯಲ್‌ ಟೌನ್‌ಶಿಪ್‌ಗಳಲ್ಲಿ ಬರುವ ಕೈಗಾರಿಕೆಗಳು, ಉತ್ಪಾದಲ ಘಟಕಗಳು, ಕಚ್ಚಾ ವಸ್ತು ಉತ್ಪಾದಕ ಘಟಕಗಳು, ಐಟಿ ಮತ್ತು ಹಾರ್ಡ್‌ವೇರ್‌ (ಈ ವ್ಯಾಪ್ತಿಯಲ್ಲಿ ಬಹುತೇಕ ಎಲ್ಲಾ ಕೈಗಾರಿಕೆಗಳು ಬರುತ್ತವೆ).

೫) ಎಲ್ಲಾ ರೀತಿಯ ನಿರ್ಮಾಣ ಕಾಮಗಾರಿಗಳು (ಕಟ್ಟಡ, ರಸ್ತೆ ಒಳಗೊಂಡು)

ಈ ಹಿಂದೆ ಕೈಗಾರಿಕೆ ಮತ್ತು ನಿರ್ಮಾಣ ಕಾಮಗಾರಿಗಳನ್ನು ನಗರಸಭೆ ಮತ್ತು ಪಾಲಿಕೆ ಒಳಗೆ ನಿಷೇಧಿಸಿ ಗ್ರಾಮೀಣ ಭಾಗದಲ್ಲಷ್ಟೇ ಅನುಮತಿ ನೀಡಿತ್ತು. ಆದರೆ ಈ ಬಾರಿ ಆ ನಿಯಮ ಇಲ್ಲ. ಅಂದರೆ ನಗರ ವ್ಯಾಪ್ತಿಯಲ್ಲೂ ಕೈಗಾರಿಕಾ ಮತ್ತು ನಿರ್ಮಾಣ ಚಟುವಟಿಕೆಗಳಿಗೆ ಅವಕಾಶ ಸಿಗಲಿದೆ.

೬) ಗ್ರಾಮೀಣ ಭಾಗದಲ್ಲಿ ಎಲ್ಲಾ ರೀತಿಯ ಕೈಗಾರಿಕೆಗಳು

೭) ನಗರಸಭೆ ಮತ್ತು ಪಾಲಿಕೆ ವ್ಯಾಪ್ತಿಯಲ್ಲಿ ಕೇವಲ ಮಾರ್ಕೆಟ್‌ ಮತ್ತು ಮಾರ್ಕೆಟ್‌ನಲ್ಲಿರುವ ಅಗತ್ಯ ವಸ್ತು ಮಾರುವ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.

೮) ನಗರ ಪ್ರದೇಶದ ವಸತಿ ಸಂಕೀರ್ಣದಲ್ಲಿರುವ ಅಗತ್ಯ ಮತ್ತು ಅವಶ್ಯಕವಲ್ಲದ ವಸ್ತುಗಳನ್ನು ಮಾರುವ ಅಂಗಡಿಗಳನ್ನು ತೆರೆಯಬಹುದಾಗಿದೆ.

೯) ಗ್ರಾಮೀಣ ಭಾಗದಲ್ಲಿ ಮಾಲ್‌ಗಳನ್ನು ಹೊರತುಪಡಿಸಿ ಎಲ್ಲ ರೀತಿಯ ಅಂಗಡಿಗಳನ್ನು ತೆರೆಯಬಹುದಾಗಿದೆ.

೧೦) ಇ-ಕಾರ್ಮಸ್‌ಗಳಿಗೆ (ಅಮೆಜಾನ್‌, ಫ್ಲಿಪ್‌ಕಾರ್ಟ್‌ ಇತ್ಯಾದಿ) ಕೇವಲ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಲಾಗಿದೆ

೧೧) ಖಾಸಗಿ ಕಚೇರಿಗಳಿಗೆ ಗರಿಷ್ಠ ಶೇಕಡಾ ೩೩ರಷ್ಟು ನೌಕರರೊಂದಿಗೆ ತೆರೆಯಲು ಅವಕಾಶ ನೀಡಲಾಗಿದೆ. ಉಳಿದವರು ಮನೆಯಿಂದಲೇ ಕೆಲಸ ಮಾಡಬೇಕು.

೧೨) ಉಳಿದಂತೆ ಎಲ್ಲಾ ರೀತಿಯ ಅಗತ್ಯಸೇವೆಗಳು – ಕೃಷಿ, ಸರ್ಕಾರಿ ಕಚೇರಿಗಳು (ಶೇಕಡಾ ೩೩ರಷ್ಟು ನೌಕರರು ಮಾತ್ರ), ಬ್ಯಾಂಕ್‌, ಅಂಚೆ ಕಚೇರಿ, ಜಲ ಮಂಡಳಿ, ಎಸ್ಕಾಂಗಳು, ಕೋರಿಯರ್‌ ಸೇವೆ, ಕೇಬಲ್‌, ಇಂಟರ್‌ನೆಟ್‌, ಎಪಿಎಂಸಿ, ಮಾಂಸ ಮಾರಾಟ, ಮೀನುಗಾರಿಕೆ, ಹೈನುಗಾರಿಕೆ, ರಸಗೊಬ್ಬರ ಮತ್ತು ಬಿತ್ತನೆ ಬೀಜ ಮಾರುವ ಅಂಗಡಿಗಳು

೧೩) ಅಗತ್ಯ ಸೇವೆ ವಾಹನಗಳ ಓಡಾಟ (ಈ ಹಿಂದಿನ ನಿಯಮವೇ ಮುಂದುವರಿಯುತ್ತೆ – ನಿರ್ಬಂಧ ಇಲ್ಲ)

೧೪) ಮದ್ಯ ಮಾರಾಟ ಇದೆ. ಮದ್ಯದಂಗಡಿಗಳಲ್ಲಿ ಏಕಕಾಲಕ್ಕೆ ಕೇವಲ ಐವರಿಗಷ್ಟೇ ಪ್ರವೇಶ. ಕೇವಲ ಪಾರ್ಸೆಲ್‌ಗಷ್ಟೇ ಅನುಮತಿ. ಸಾಮಾಜಿಕ ಅಂತರ ಕಡ್ಡಾಯ.

೧೫) ಸಲೂನ್‌, ಸ್ಪಾ ತೆರೆಯಬಹುದು

LEAVE A REPLY

Please enter your comment!
Please enter your name here