ಆರು ವಾರ, ಐದು ಹೇಳಿಕೆ; ಆದರೂ ಇಲ್ಲ ಕ್ರಮ..!

ಕೇವಲ ಒಂದೂವರೆ ತಿಂಗಳಲ್ಲಿ ಬಿಜೆಪಿಯ ಐವರು ಹಿರಿಯ ನಾಯಕರು, ಪಕ್ಷಕ್ಕೆ ಮುಜುಗರ ತರುವ ಹೇಳಿಕೆಗಳನ್ನು ನೀಡಿದ್ದಾರೆ.

ಹೇಳಿಕೆ 1
ನಾವು ಅಧಿಕಾರಕ್ಕೆ ಬಂದು ಕೇವಲ ಐದು ತಿಂಗಳಾಗಿದೆ.. ನೀವು ಜಾಸ್ತಿ ನಕ್ರಾ ಮಾಡಬೇಡಿ. ಗೊತ್ತಲ್ಲ ನಾವಿರೊದು ಶೇ.80ರಷ್ಟು ಜನ.. ನೀವಿರೋದು ಕೇವಲ ಶೇ.15ರಷ್ಟು ಮಂದಿ. ನಾವು ತಿರುಗಿಬಿದ್ರೆ ಏನಾಗುತ್ತೆ ಅನ್ನೋ ಪರಿಜ್ಞಾನ ನಿಮಗಿರಲಿ. ಇದು ನಾವು ನೀಡುತ್ತಿರುವ ಎಚ್ಚರಿಕೆ.

– ಸೋಮಶೇಖರ ರೆಡ್ಡಿ, ಬಿಜೆಪಿ ಶಾಸಕ

=====

ಹೇಳಿಕೆ 2
ದೇಶದ್ರೋಹಿಗಳನ್ನು ಗುಂಡಿಟ್ಟು ಸಾಯಿಸಬೇಕು.. ಬಿರಿಯಾನಿ ತಿನ್ನಿಸಬಾರದು

– ಸಿ.ಟಿ.ರವಿ, ಕನ್ನಡ ಮತ್ತು ಸಂಸ್ಕøತಿ ಸಚಿವ

=====

ಹೇಳಿಕೆ 3
ಮಸೀದಿಗಳು ಪ್ರಾರ್ಥನೆಗೆ ಬದಲಾಗಿ ಶಸ್ತ್ರಾಸ್ತ್ರ ಸಂಗ್ರಹಾಗಾರಗಳಾಗಿ ಮಾರ್ಪಟ್ಟಿವೆ

– ರೇಣುಕಾಚಾರ್ಯ, ಮಾಜಿ ಸಚಿವ

=====

ಹೇಳಿಕೆ 4
ಮಹಾತ್ಮಾ ಗಾಂಧಿ ನಡೆಸಿದ ಸತ್ಯಾಗ್ರಹದಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿಲ್ಲ. ಬ್ರಿಟೀಷರಿಗೆ ಸಾಕಾಗಿ ಭಾರತ ಬಿಟ್ಟು ಹೋದರು.

– ಅನಂತ ಕುಮಾರ್ ಹೆಗಡೆ, ಉತ್ತರ ಕನ್ನಡ ಸಂಸದ

======

ಹೇಳಿಕೆ 5
ಹೆಚ್‍ಎಸ್ ದೊರೆಸ್ವಾಮಿ ಓರ್ವ ನಕಲಿ ಸ್ವಾತಂತ್ರ್ಯ ಹೋರಾಟಗಾರ.. ಪಾಕಿಸ್ತಾನದ ಏಜೆಂಟ್

– ಬಸನಗೌಡ ಪಾಟೀಲ್ ಯತ್ನಾಳ್, ಕೇಂದ್ರದ ಮಾಜಿ ಸಚಿವ

=====

ಬಳ್ಳಾರಿಯ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ, ಸಚಿವ ಸಿಟಿ ರವಿ, ಮಾಜಿ ಮಂತ್ರಿ ರೇಣುಕಾರ್ಯ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿದರೂ ಬಿಜೆಪಿ ಅಧ್ಯಕ್ಷರದ್ದು ಮೌನವೇ ಉತ್ತರವಾಗಿದೆ.

ಇನ್ನು ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಹೋರಾಟವನ್ನು ಅಪಹಾಸ್ಯ ಮಾಡಿ, ಅಪಮಾನ ಮಾಡಿದರೂ ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆಗೆ ಶೋಕಾಸ್ ನೀಡಿದ್ದನ್ನು ಬಿಟ್ಟರೆ, ಬಿಜೆಪಿ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ.

102ರ ಹರೆಯದಲ್ಲೂ ದೇಶದ ಬಗ್ಗೆ ಚಿಂತನೆ ನಡೆಸುವ, ಬೀದಿಗಿಳಿದು ಹೋರಾಟ ಮಾಡುವ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್ ಎಸ್ ದೊರೆಸ್ವಾಮಿ ಅವರು, ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪಾಲಿಗೆ ಓರ್ವ ನಕಲಿ ಸ್ವಾತಂತ್ರ್ಯ ಹೋರಾಟಗಾರ.. ಪಾಕಿಸ್ತಾನದ ಏಜೆಂಟ್.. ಇದನ್ನು ಕೇಳಿಸಿಕೊಂಡಿಯೂ ಬಿಜೆಪಿ ಅಧ್ಯಕ್ಷರು ಸುಮ್ಮನೆ ಇದ್ದಾರೆ.

ಈ ಬಗ್ಗೆ ಕಾಂಗ್ರೆಸ್ ನಾಯಕರು ಯಥಾ ರೀತಿ ಆಕ್ರೋಶ ಹೊರಹಾಕುತ್ತಿದ್ದಾರೆ.

ಇನ್ನು ಬಿಜೆಪಿಯ ಕೆಲವು ನಾಯಕರಲ್ಲಿ ಈ ರೀತಿಯ ಪ್ರಚೋದನಾಕಾರಿ ಹೇಳಿಕೆ ನೀಡುವವರ ಬಗ್ಗೆ, ಪಕ್ಷದ ಹೈಕಮಾಂಡ್ ಮೌನದ ಬಗ್ಗೆ ಅಸಮಾಧಾನ ಇದೆ. ಆದರೆ, ಹೇಳಿಕೊಳ್ಳುವಂತಿಲ್ಲ.. ಬಿಡುವಂತಿಲ್ಲ.

LEAVE A REPLY

Please enter your comment!
Please enter your name here