ಆತ್ಮಹತ್ಯೆಗೆ ಯತ್ನಿಸಿದನಾ ನಿರ್ಭಯ ದೋಷಿ..?

ನಿರ್ಭಯ ಹತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಮಾಚ್ 3ರಂದು ಬೆಳಗ್ಗೆ 6 ಗಂಟೆಗೆ ಮರಣದಂಡನೆ ಶಿಕ್ಷೆ ನೀಡಬೇಕೆಂದು ದೆಹಲಿಯ ಪಟಿಯಾಲ ಕೋರ್ಟ್ ಆದೇಶ ನೀಡಿದೆ.

ಆದರೆ, ಗಲ್ಲು ಮುಂದೂಡಿಕೆ ಮಾಡಲು ಅಪರಾಧಿಗಳು ನಾನಾ ರೀತಿಯಲ್ಲಿ ಪ್ರಯತ್ನ ಮುಂದುವರೆಸಿದ್ದಾರೆ. ದೋಷಿ ಪವನ್ ಗುಪ್ತಾ ಕ್ಯುರೇಟಿವ್ ಪಿಟೀಷನ್ ಹಾಕಲು ಸಿದ್ಧತೆ ನಡೆಸಿದ್ದಾನೆ.

ಮತ್ತೊಬ್ಬ ದೋಷಿ ವಿನಯ್ ಶರ್ಮಾ ವಿಚಿತ್ರವಾಗಿ ವರ್ತಿಸುತ್ತಿದ್ದು, ತಿಹಾರ್ ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಜೈಲಿನ ಗೋಡೆಗಳಿಗೆ ತಲೆ ಚಚ್ಚಿಕೊಂಡಿದ್ದಾನೆ. ಜೈಲು ಗಾರ್ಡ್‍ಗಳು ಕೂಡಲೇ ಹೋಗಿ ತಡೆದಿದ್ದಾರೆ. ಆದರೆ, ಅಷ್ಟರೊಳಗೆ ವಿನಯ್ ಶರ್ಮಾ ತಲೆಗೆ ಗಾಯಗಳಾಗಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here