ಆಗಸ್ಟ್ ನಿಂದ ಥಿಯೇಟರ್, ಜಿಮ್ ಗಳಿಗೆ ಸ್ವಾತಂತ್ರ್ಯನಾ..?

ಕೊರೋನಾ ತಾಂಡವದ ಸಂದರ್ಭದಲ್ಲೇ ಅನ್ ಲಾಕ್ 2 ಮುಗಿಯುತ್ತಿದೆ. ಹೀಗಾಗಿ ಅನ್ ಲಾಕ್ 3ಯಲ್ಲಿ ಯಾವುದಕ್ಕೆಲ್ಲಾ ರಿಲೀಫ್ ಸಿಗಲಿದೆ ಎಂಬ ಪ್ರಶ್ನೆ ಎದ್ದಿದೆ. ಸೋಮವಾರ ಪ್ರಧಾನಿ ಮೋದಿ, ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿ, ಯಾವುದಕ್ಕೆಲ್ಲಾ ರಿಲೀಫ್ ನೀಡಬೇಕು ಎಂಬ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಯಾವುದಕ್ಕೆಲ್ಲಾ ರಿಲೀಫ್ ಸಾಧ್ಯತೆ..?

# ಸಿನಿಮಾ ಥಿಯೇಟರ್ ಆರಂಭ ಆಗಬಹುದು..

ಈಗಾಗಲೇ ಮಾಹಿತಿ ಮತ್ತು ಪ್ರಸಾರ ಇಲಾಖೆಯಿಂದ ಸಚಿವಲಾಯ ಸಿನಿಮಾ ಮಂದಿರ ಆರಂಭ ಮಾಡಬಹುದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಗೃಹ ಇಲಾಖೆಗೆ ಶಿಫಾರಸುಗಳನ್ನು ಮಾಡಿದೆ. ಅದರ ಪ್ರಕಾರ,

* ಸೀಟುಗಳ ಮಧ್ಯೆ ಸಾಮಾಜಿಕ ಅಂತರ

* ಸಾಲುಬಿಟ್ಟು ಸಾಲು ಅಸನ ವ್ಯವಸ್ಥೆ

ಆದರೆ, ಮಾಹಿತಿ ಮತ್ತು ಪ್ರಸಾರ ಇಲಾಖೆಯ ಷರತ್ತುಗಳಿಗೆ ಥಿಯೇಟರ್ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದಾರೆ‌. ಶೇಕಡಾ 25ರಷ್ಟು ಪ್ರೇಕ್ಷಕರೊಂದಿಗೆ ಥಿಯೇಟರ್ ನಡೆಸುವುದು ಕಷ್ಟ ಎಂದಿದ್ದಾರೆ. ಆದರೆ ಅಂತಿಮ ನಿರ್ಣಯ ಕೈಗೊಳ್ಳಬೇಕಿರೋದು ಕೇಂದ್ರ ಗೃಹ ಮಂತ್ರಾಲಯ.

ಇನ್ನು ಜಿಮ್ ಆರಂಭದ ಕುರಿತು ಯಾವುದೇ ಮುನ್ಸೂಚನೆಯನ್ನು ಕೇಂದ್ರ ಸರ್ಕಾರ ಇದುವರೆಗೆ ನೀಡಿಲ್ಲ.

ಇತ್ತ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮತ್ತು ಅನ್ ಲಾಕ್ ಕ್ರಮಗಳಿಗೆ ಒಲವು ತೋರಿದ್ದಾರೆ.

LEAVE A REPLY

Please enter your comment!
Please enter your name here