ಆಕ್ಸಿಜನ್ ಪಡೆಯೋಕೆ ಪರದಾಡಿದ್ದೇನೆ; ಸಾಧು ಕೋಕಿಲಾ

ದೇಶದಲ್ಲಿ ಕೊರೋನಾ‌ ಪ್ರಕರಣಗಳು‌ ಹೆಚ್ಚಾಗುತ್ತಿರುವ ಕುರಿತು ಮಾತನಾಡಿದ ಸಾಧು ಕೋಕಿಲಾ , ತಾವು ಒಂದು ಆಕ್ಸಿಜನ್‌ಗಾಗಿ ಪರದಾಡಿದ್ದನ್ನ ನೆನಪಿಸಿಕೊಂಡಿದ್ದಾರೆ. ಕೊರೋನಾದ ತೀವ್ರತೆ ಯಾವುದೂ ಸುಳ್ಳಲ್ಲ ಅಂದಿರುವ ಸಾಧು ಕೋಕಿಲಾ , ಎಲ್ಲರಿಗೂ ಹುಷಾರಾಗಿರಲು ಸೂಚಿಸಿದ್ದಾರೆ.

ನಮ್ಮ ಅಣ್ಣನ ಮಗನಿಗೆ ಕೊರೋನಾ ಪಾಸಿಟಿವ್ ಆಗಿ ನೆಗೆಟಿವ್ ಆಗಿದೆ . ಆದ್ರೂ ಅವನಿಗೆ ಉಸಿರಾಟದ ತೊಂದರೆ ಆಗ್ತಿದೆ. ಒಬ್ಬ ಸೆಲೆಬ್ರಿಟಿ ಆಗಿ ನಾನು ಒಂದು ಆಕ್ಸಿಜನ್ ಪಡೆಯೋಕೆ ಪರದಾಡಿದ್ದೇನೆ. ದಯವಿಟ್ಟು ಹುಷಾರಾಗಿರಿ , ಟಿವಿಯಲ್ಲಿ ತೋರಿಸೋದು ಸುಳ್ಳು ಅಂದುಕೊಳ್ಳಬೇಡಿ. ಹಬ್ಬ- ಹರಿದಿನ , ಜಾತ್ರೆ ಎಲ್ಲಾ ಬಿಟ್ಟು ಹುಷಾರಾಗಿರಿ ಅಂತ ಮೊದಲ ದಿನದಿಂದ ಹೇಳುತ್ತಿದ್ದೆ. ಈಗ ಜನರಿಗೆ ಅರ್ಥ ಆಗ್ತಿದೆ.

ಬಿಸಿನೆಸ್ ರಾಜಕಾರಣದಿಂದ ಇಷ್ಟೆಲ್ಲಾ ಆಗುತ್ತಿದೆ. ಇದನ್ನ ತಡೆಯೋಕೆ ಹೆಲ್ತ್ ಸಿಷ್ಟಮ್ ಸರಿ ಇರಬೇಕು. ಶಿಕ್ಷಣ ಮತ್ತು ಆರೋಗ್ಯ ಚೆನ್ನಾಗಿದ್ದರೆ ಇಡೀ ದೇಶ ಚೆನ್ನಾಗಿರುತ್ತೆ. ಮನಸ್ಸು ಗಟ್ಟಿ ಇಟ್ಟುಕೊಳ್ಳಿ , ಪಾಸಿಟಿವ್ ಆಗಿರಿ. ಭಯ ಪಡಬೇಡಿ , ಎಲ್ಲೆಂದರಲ್ಲಿ ಓಡಾಡಬೇಡಿ. ರಾಜಕಾರಣಿಗಳು ಸಭೆ ಸಮಾರಂಭ ಮಾಡುತ್ತಿದ್ದಾರೆ , ಅದನ್ನ ನೋಡಿ ಜನ ತಲೆ ಕೆಡಿಸಿಕೊಳ್ಳಲ್ಲ. ದಯವಿಟ್ಟು ಸಾಮಾಜಿಕ ಅಂತರ ಕಾಯ್ದುಕೊಳ್ಳಿ , ಹುಷಾರಾಗಿರಿ ‘ ಅಂತ ಕಿವಿಮಾತನ್ನು ನೀಡಿದ್ದಾರೆ ಸಾಧು ಕೋಕಿಲಾ.

LEAVE A REPLY

Please enter your comment!
Please enter your name here