ಆಕಾಶದಲ್ಲಿ ಭಾರತೀಯ ಗಗನಯಾತ್ರಿಗಳು ಸೇವಿಸುವುದು ಈ ಆಹಾರಗಳನ್ನೇ…!

2022ರ ವೇಳೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ನಾಲ್ವರು ಭಾರತೀಯ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿಕೊಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಆಕಾಶ ಅಧ್ಯಯನ ವೇಳೆ ಗಗನಯಾತ್ರಿಗಳಿಗಾಗಿ ವಿಶೇಷ ದೇಶಿ ಶೈಲಿಯ ಆಹಾರ ಪದಾರ್ಥಗಳು ಸಿದ್ಧವಾಗುತ್ತಿವೆ.

ಮೈಸೂರಿನಲ್ಲಿರುವ ರಕ್ಷಣಾ ಸಂಶೋಧನೆ ಮತ್ತು ಅಧ್ಯಯನ ಸಂಸ್ಥೆ ಡಿಆರ್ಡಿಓ ಅಡಿಯಲ್ಲಿ ಬರುವ ರಕ್ಷಣಾ ಆಹಾರ ಸಂಶೋಧನಾ ಲ್ಯಾಬೋರೇಟರಿಯಲ್ಲಿ 30 ಬಗೆಯ ಆಹಾರ ಪದಾರ್ಥಗಳು ಸಿದ್ಧಗೊಳ್ಳುತ್ತಿವೆ.

ಇಡ್ಲಿ, ಚಟ್ನಿ, ಸಾಂಬಾರು, ವೆಜ್ ರೋಲ್, ಎಗ್ ರೋಲ್, ಚಿಕನ್ ಬಿರಿಯಾನಿ, ಪಲಾವ್, ಉಪ್ಪಿಟ್ಟು, ಸೂಜಿ ಹಲ್ವಾ ಹೀಗೆ 30 ಬಗೆಯ ತಿನಿಸುಗಳನ್ನು ತಯಾರು ಮಾಡಲಾಗುತ್ತಿದೆ.

2022ರಲ್ಲಿ ಇದೇ ಭಾರತ ಮೊದಲ ಬಾರಿಗೆ ಗಗನಯಾತ್ರಿಗಳನ್ನು ಆಕಾಶಕ್ಕೆ ಕಳುಹಿಸಿಕೊಡಲು ಅವರಿಗೆ ಜನವರಿಯ ಮೂರನೇ ವಾರದಿಂದ ರಷ್ಯಾದಲ್ಲಿ ತರಬೇತಿ ಆರಂಭವಾಗಲಿದೆ. ಈ ನಾಲ್ವರೂ ಭಾರತೀಯ ವಾಯುಸೇನೆಗೆ ಸೇರಿದ ಅಧಿಕಾರಿಗಳಾಗಿದ್ದಾರೆ.

ಗಗನಯಾತ್ರಿಗಳಿಗೆ ಬಾಹ್ಯಾಕಾಶದಲ್ಲಿ ಸೇವಿಸುವ ಸಲುವಾಗಿ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಬಹುದು ಸವಾಲಿನ ಕೆಲಸ. ಯಾಕೆಂದರೆ ಶೂನ್ಯ ಗುರುತ್ವಾಕರ್ಷಣೆಯಲ್ಲಿ ಆಹಾರದ ಪೊಟ್ಟಣವನ್ನು ತೆಗೆದರೆ ಆಗ ಆಹಾರ ಪದಾರ್ಥಗಳು ಗಗನಯಾತ್ರಿಗಳು ಇರುವ ನೌಕೆಯೊಳಗೆ ಗಾಳಿಯಲ್ಲಿ ತೇಲುತ್ತವೆ. ಜ್ಯೂಸ್ ಮುಂತಾದ ದ್ರವರೂಪದ ವಸ್ತುಗಳು ಗುಳ್ಳೆಗಳಂತೆ ಹಾರಾಡುತ್ತವೆ. ಹೀಗಾಗಿ ಶೂನ್ಯ ಗುರುತ್ವಾಕರ್ಷಣೆಗೆ ತಕ್ಕಂತೆ ಆಹಾರದ ಪೊಟ್ಟಣಗಳನ್ನು ರೆಡಿ ಮಾಡಬೇಕಾಗುತ್ತದೆ.

ಆಹಾರ ಪಟ್ಟಣದ ಜೊತೆಗೆ ಜ್ಯೂಸ್ ಮುಂತಾದ ಪಾನೀಯಗಳನ್ನು ಸೇವಿಸಲು ವಿಶೇಷ ಪ್ಯಾಕೆಟ್ಟುಗಳನ್ನು ಸಿದ್ಧಪಡಿಸಲಾಗುತ್ತಿದೆ. ಆಹಾರವನ್ನು ಬಿಸಿ ಮಾಡಿಕೊಳ್ಳಲು ವಿಶೇಷ ಹೀಟರ್ ನನ್ನು DFRL ತಯಾರಿಸುತ್ತಿದೆ.

1961 ರಲ್ಲಿ ವಿಶ್ವದಲ್ಲೇ ಮೊದಲ ಬಾರಿಗೆ ಗಗನಯಾನ ಕೈಗೊಂಡಿತ್ತು ರಷ್ಯಾದ ವಿಜ್ಞಾನಿ ಯೂರಿ ಗಗಾರಿನ್ ಟೂತ್ಪೇಸ್ಟ್ ನಮೂನೆಯ ಟ್ಯೂಬ್ ಮೂಲಕ ಮಾಂಸ ಮತ್ತು ಸಾಸ್ ನನ್ನು ಸೇವಿಸಿದ್ದರು.

 

LEAVE A REPLY

Please enter your comment!
Please enter your name here