ಅಲ್ಪಸಂಖ್ಯಾತರಿಗೆ ಐತಿಹಾಸಿಕ ಅನ್ಯಾಯಕ್ಕೆ ಸಿಎಎ ಮೂಲಕ ಪರಿಹಾರ – ಪ್ರಧಾನಿ ಮೋದಿ ಸಮರ್ಥನೆ

ನಾನು ನನ್ನ ಪ್ರತಿಷ್ಠೆಗಾಗಿ ಕೆಲ್ಸ ಮಾಡಲು ಹುಟ್ಟಿಲ್ಲ, ನಾನು ದೇಶದ ಘನತೆಗಾಗಿ ಕೆಲ್ಸ ಮಾಡುತ್ತಿದ್ದೇನೆ. ಇದನ್ನು ವಿರೋಧ ಪಕ್ಷಗಳು ಅರ್ಥ ಮಾಡಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನವದೆಹಲಿಯಲ್ಲಿ ಎನ್‌ಸಿಸಿ ಕೆಡೆಟ್‌ಗಳನ್ನು ಉದ್ದೇಶಿಸಿ ಮಾತಾಡಿದ ಪ್ರಧಾನಿ,

ಅಲ್ಪಸಂಖ್ಯಾತರಿಗೆ ಎಸಗಲಾದ ಐತಿಹಾಸಿಕ ಅನ್ಯಾಯವನ್ನು ಸರಿಪಡಿಸಲು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತರಲಾಗಿದೆ. ಪಾಕಿಸ್ತಾನ ಅಪ್ಘಾನಿಸ್ತಾನ, ಬಾಂಗ್ಲಾದೇಶದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ಹಳೆಯ ಭರವಸೆಯನ್ನು ಬಿಜೆಪಿ ಈಡೇರಿಸಿದೆ.

ನೆಹರು ಮತ್ತು ಲಿಯಾಖತ್‌ ನಡುವಿನ ಒಪ್ಪಂದದಲ್ಲೂ ಸಂಕಷ್ಟ ಸಂದರ್ಭದಲ್ಲಿ ಅಲ್ಪಸಂಖ್ಯಾತರಿಗೆ ನೆರವಾಗುವ ಬಗ್ಗೆ ಉಲ್ಲೇಖಿಸಲಾಗಿದೆ. ಮಹಾತ್ಮ ಗಾಂಧಿ ಕೂಡಾ ಇದನ್ನೇ ಬಯಸಿದ್ದರು. ಭಾರತದ ಮಾಡಿದ್ದ ವಾಗ್ದಾನವನ್ನು ಈಡೇರಿಸಲು ನಾವು ಪೌರತ್ವ ಕಾಯ್ದೆಗೆ ತಿದ್ದುಪಡಿ ತಂದಿದ್ದೇವೆ. ದಶಕಗಳಷ್ಟು ಹಳೆಯದಾದ ಸಮಸ್ಯೆಗೆ ಪರಿಹರಿಸುತ್ತಿರುವ ನಮ್ಮ ಸರ್ಕಾರ ನಿರ್ಧಾರಕ್ಕೆ ಕೋಮುಬಣ್ಣ ಹಚ್ಚುತ್ತಿರುವವರ ನಿಜವಾದ ಮುಖವನ್ನು ದೇಶ ಈಗ ನೋಡುತ್ತಿದೆ. ದೇಶ ಶಾಂತವಾಗಿದೆ, ಆದ್ರೆ ಎಲ್ಲವನ್ನೂ ಗಮನಿಸುತ್ತಿದೆ

ಎಂದರು.

ಕೆಲವು ನಾಯಕರು ತಮ್ಮನ್ನು ತಾವು ದಲಿತರ ಧ್ವನಿಯೆಂದು ಕರೆಸಿಕೊಳ್ಳುತ್ತಾರೆ. ಆದರೆ ಇದೇ ನಾಯಕರಿಗೆ ಪಾಕಿಸ್ತಾನದಲ್ಲಿ ದಲಿತರ ಮೇಲೆ ಆಗುತ್ತಿರುವ ದೌರ್ಜನ್ಯ ಕಣ್ಣಿಗೆ ಕಾಣುತ್ತಿಲ್ಲ. ನಮ್ಮ ಸರ್ಕಾರ ತೆಗೆದುಕೊಂಡ ನಿರ್ಧಾರದ ಬಗ್ಗೆ ವದಂತಿಗಳನ್ನು ಹಬ್ಬಿಸುತ್ತಿರುವುದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಧಕ್ಕೆ ಆಗುತ್ತಿದೆ. ಅವರಿಗೆ ಬದಲಾಗುತ್ತಿರುವ ಭಾರತವನ್ನು ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ

ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದೆ.

LEAVE A REPLY

Please enter your comment!
Please enter your name here