ಅಲರ್ಟ್.. ಅಲರ್ಟ್.. ನಾಳೆಯೇ ಯುದ್ಧ ಘೋಷಣೆ..!

ಅಮೆರಿಕಾ – ಇರಾನ್ ನಡುವಣ ಸಂಘರ್ಷ ಮುಗಿಲುಮುಟ್ಟಿದೆ. ತಮ್ಮ ಕಮಾಂಡರ್ ಖಾಸಿ0 ಸುಲೆಮಾನಿಯನ್ನು ಬಲಿ ಪಡೆದ ಅಮೆರಿಕಾ ವಿರುದ್ಧ ಇರಾನ್, ಇರಾಕ್‍ನಲ್ಲಿರುವ ಅಮೆರಿಕಾ ಸೈನಿಕ ಸ್ಥಾವರಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. 12 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿ ಅಮೆರಿಕಾಗೆ ಸವಾಲು ಹಾಕಿದೆ.

ಇದನ್ನು ತೀವ್ರವಾಗಿ ಖಂಡಿಸಿರುವ ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಯುದ್ಧ ಘೋಷಣೆಯ ಮುನ್ಸೂಚನೆ ನೀಡಿದ್ದಾರೆ. ನಾಳೆ ಬೆಳಗ್ಗೆ ಮಹತ್ವದ ಪ್ರಕಟಣೆ ಹೊರಡಿಸುವುದಾಗಿ ಘೋಷಿಸಿದ್ದಾರೆ.

ಎಲ್ಲಾ ಚನ್ನಾಗಿದೆ..! ಇರಾಕ್‍ನಲ್ಲಿರುವ ನಮ್ಮ ಎರಡು ಸೈನಿಕ ಸ್ಥಾವರಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಈ ದಾಳಿಯಿಂದಾದ ನಷ್ಟವನ್ನು ನಾವು ಲೆಕ್ಕ ಹಾಕುತ್ತಿದ್ದೇವೆ. ಇದೆಲ್ಲಾ ತುಂಬಾ ಚನ್ನಾಗಿದೆ.! ಜಗತ್ತಿನ ಯಾವ ದೇಶದ ಬಳಿಯೂ ಇಲ್ಲದ ರಕ್ಷಣಾ ವ್ಯವಸ್ಥೆ ನಮ್ಮ ಬಳಿ ಇದೆ. ನಾಳೆ ಒಂದು ನಾನು ಒಂದು ಘೋಷಣೆ ಮಾಡುತ್ತೇನೆ
– ಡೋನಾಲ್ಡ್ ಟ್ರಂಪ್, ಅಮೆರಿಕಾ ಅಧ್ಯಕ್ಷ

ಡೊನಾಲ್ಡ್ ಟ್ರಂಪ್ ಅವರ ಈ ಟ್ವೀಟ್ ಯುದ್ಧ ಘೋಷಣೆಯ ಸಂಕೇತಗಳನ್ನು ನೀಡಿದೆ. ಇದು ಮೂರನೇ ಮಹಾಯುದ್ಧಕ್ಕೆ ದಾರಿ ಮಾಡುತ್ತಾ ಎಂದು ಪ್ರಶ್ನೆ ಎದ್ದಿದೆ.

ಆತ್ಮರಕ್ಷಣೆಗಾಗಿಯೇ ದಾಳಿ; ಇರಾನ್
ವಿಶ್ವದ ದೊಡ್ಡಣ್ಣ ಯುದ್ಧ ಘೋಷಣೆಯ ಎಚ್ಚರಿಕೆ ನಡುವೆಯೂ ಅಮೆರಿಕಾ ಸೈನಿಕ ಸ್ಥಾವರಗಳ ಮೇಲೆ ಕ್ಷಿಪಣಿ ದಾಳಿಯನ್ನು ಇರಾನ್ ಸಮರ್ಥನೆ ಮಾಡಿಕೊಂಡಿದೆ. ಆತಕ್ಷರಕ್ಷಣೆಗಾಗಿಯೇ ನಾವು ಈ ದಾಳಿ ಮಾಡಬೇಕಾಯಿತು ಎಂದು ಇರಾನ್ ವಿದೇಶಾಂಗ ಸಚಿವ ಜಾವೇದ್ ಜರೀಫ್ ಸ್ಪಷ್ಟಪಡಿಸಿದ್ದಾರೆ.

ವಿಶ್ವಸಂಸ್ಥೆಯ ಚಾರ್ಟರ್ ಆರ್ಟಿಕಲ್ 51ರ ಪ್ರಕಾರ, ನಮ್ಮ ಪೌರರು ಮತ್ತು ಅಧಿಕಾರಿಗಳ ಮೇಲೆ ರಣಹೇಡಿಗಳ ರೀತಿ ದಾಳಿ ನಡೆಸಿದವರಿಂದ ನಮ್ಮವರನ್ನು ರಕ್ಷಿಸಿಕೊಳ್ಳುವ ಸಲುವಾಗಿಯೇ ಈ ದಾಳಿ ನಡೆಸಲಾಗಿದೆ. ನಾವು ಯುದ್ಧವನ್ನು ಬಯಸುತ್ತಿಲ್ಲ. ಆದರೆ, ನಮ್ಮ ಮೇಲೆ ದಾಳಿಗೆ ಮುಂದಾದರೇ ನಾವು ಸುಮ್ಮನಿರುವುದೇ ಇಲ್ಲ. ನಮಗೆ ಸಿಗುವ ಯಾವ ಅವಕಾಶವನ್ನು ಕಳೆದುಕೊಳ್ಳುವ ಪ್ರಶ್ನೆಯೇ ಇಲ್ಲ.
– ಜಾವೇದ್ ಜರೀಫ್, ಇರಾನ್ ವಿದೇಶಾಂಗ ಸಚಿವ

LEAVE A REPLY

Please enter your comment!
Please enter your name here