ಅರ್ಬನ್‌ ನಕ್ಸಲರೆಂದರೂ ಸುಮ್ಮನಿದ್ದೀರಾ? ಯುವಕರಿಗೆ ಡಿಕೆಶಿ ಪ್ರಶ್ನೆ

ಪೌರತ್ವ ಕಾಯ್ದೆ (ತಿದ್ದುಪಡಿ) ಕಾಯ್ದೆಯ ವಿರುದ್ಧ ಹೋರಾಡಿದವರನ್ನು ಪ್ರಧಾನಿಯವರು ಅರ್ಬನ್‌ (ನಗರ ನಕ್ಸಲರು) ಎಂದು ಕರೆದಿದ್ದಾರೆ.ಯುವಕರು ಯಾಕೆ ಇನ್ನೂ ಸುಮ್ಮನೆ ಕುಳಿತಿದ್ದಾರೆ ಎಂದು ಕಾಂಗ್ರೆಸ್‌ ಶಾಸಕ ಡಿ.ಕೆ ಶಿವಕುಮಾರ್‌ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ ಸ್ಥಾಪನಾ ದಿನಾಚರಣಾ ಅಂಗವಾಗಿ ಶನಿವಾರ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದ ಗೌರವಾನ್ವಿತ ಮೋದಿ ಸಾಹೇಬ್ರು. ನಗರದಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗಳಿಗೆ ಅರ್ಬನ್ ನಕ್ಸಲ್ ಎಂದು ಕರೆಯುತ್ತಿದ್ದಾರೆ.

ಯಾವ ವಿದ್ಯಾವಂತರು ಅವರಿಗೆ ಶಕ್ತಿ ತುಂಬಿದರೋ ಇಂದು ಅವರನ್ನೇ ಅರ್ಬನ್ ನಕ್ಸಲ್ ಅಂತಾ ಕರೆಯಲಾಗುತ್ತಿದೆ ಎಂದು ಹೇಳಿದರು. ಹಾಗಾಗಿ ಪ್ರಧಾನಿ ಮೋದಿಯವರು ದೇಶದ ಯುವಕರಲ್ಲಿ ಈ ಬಗ್ಗೆ ಕ್ಷಮೆ ಕೇಳಬೇಕು.

ಈ ದೇಶದಲ್ಲಿ ವಿದ್ಯಾವಂತರು ಇರದೇ ಇದ್ರು ನಡೆಯುತ್ತೆ. ಆದ್ರೆ ಜೀವನ ನಡೆಸುವ ಬುದ್ದಿ ಈ ಬಡ ಜನರಲ್ಲಿ ಇದೆ. ಇಂತಹ ಜನರನ್ನು ಬಿಟ್ಟು ದೇಶ ಇರೋಕೆ ಸಾಧ್ಯ ಇಲ್ಲ.

ಎದೆ ಸೀಳಿದ್ರೆ ನಾಲ್ಕು ಅಕ್ಷರ ಇಲ್ಲ ಅಂತಾ ನಿಮ್ಮ ಸಂಸದರು ಹೇಳಿದ್ದಾರೆ. ಕೆಲವು ಸಂಸದರು ಕಸುಬಿನ ಬಗ್ಗೆ ಕೀಳಾಗಿ ಮಾತಾಡ್ತಾರೆ. ಇಂತಹವನ್ನೆಲ್ಲಾ ಮಾತಾಡ್ತಾ ಇದ್ರೂ ನೀವೂ ಸುಮ್ಮನೆ ಇದ್ದೀರಲ್ವಾ? ಇದಕ್ಕಿಂತ ದುರಂತ ಇನ್ನೇನು ಬೇಕು ಎಂದು ಕೇಳಿದ್ದಾರೆ.

ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ …ನಾವು ಕೇವಲ ಸ್ವಾತಂತ್ರ್ಯ ತಂದು ಕೊಟ್ಟು ಸುಮ್ಮನಾಗಲಿಲ್ಲ. ಸಂವಿಧಾನ ಕೂಡ ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿಕೊಟ್ಟಿದ್ರು, ಆದರೆ ಇಂದು ದೇಶ ಕವಲು ಹಾದಿಯಲ್ಲಿ ಹೊರಟಿದೆ.

ಸಂವಿಧಾನಕ್ಕೆ, ಭಾರತದ ಐಕ್ಯತೆಗೆ ಧಕ್ಕೆ ಆಗ್ತಿದೆ. ಸರ್ವಧರ್ಮ ತತ್ವಕ್ಕೆ ಧಕ್ಕೆ ಆಗುತ್ತಿದೆ. ಸೋನಿಯಾ ಗಾಂಧಿ ಎರಡೆರಡು ಬಾರಿ ಪ್ರಧಾನಿ ಹುದ್ದೆ ತ್ಯಾಗ ಮಾಡಿದ್ದಾರೆ ..ಇಂದಿರಾ ಗಾಂಧಿ, ರಾಜೀವ್ ಗಾಂಧಿ ದೇಶಕ್ಕಾಗಿ ಪ್ರಾಣ ಕೊಟ್ಟಿದ್ದಾರೆ..

ದೇಶಕ್ಕಾಗಿ ಕೇವಲ ಆಸ್ತಿ ಅಲ್ಲ- ದೇಶಕ್ಕಾಗಿ ತನ್ನ ಪ್ರಾಣ ತ್ಯಾಗ ಮಾಡಿದ್ದಾರೆ. ಮಂಗಳೂರಿನಲ್ಲಿ ಇಂಟರ್ ನೆಟ್ ಬಂದ್ ಮಾಡಿದ್ರು. ಇಡೀ ದೇಶವೇ ನಮ್ಮ ರಾಜ್ಯವನ್ನು ನೋಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

 

LEAVE A REPLY

Please enter your comment!
Please enter your name here