ಅರಬ್ಬೀ ಸಮುದ್ರದ ಅಭಯರಾಣಿ ಅಬ್ಬಕ್ಕ ಸಿನಿಮಾ

ಹರಿವು, ACT 1978 ಮುಂತಾದ ಪ್ರಸಿದ್ಧ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಮಂಸೋರೆ ಈಗ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ.  ಕರ್ನಾಟಕದ ಪ್ರಸಿದ್ಧ ರಾಣಿಯರಲ್ಲಿ ಒಬ್ಬರಾದ, ಅರಬ್ಬೀ ಸಮುದ್ರದ ಅಭಯ ರಾಣಿಯೆಂದೇ ಖ್ಯಾತಿಯುಳ್ಳ ಕನ್ನಡ ನಾಡಿನ ವೀರ ಮಹಿಳೆ ರಾಣಿ ಅಬ್ಬಕ್ಕ ರಾಣಿಯ ಸಿನಿಮಾವೊಂದನ್ನು ನಿರ್ದೇಶಿಸುತ್ತಿದ್ದಾರೆ.

ಅಬ್ಬಕ್ಕ ಜೀವನದ ಸಾಹಸಗಾಥೆಯನ್ನು ತೆರೆಯ ಮೇಲೆ ತರಲು ಮಂಸೋರೆ ಸಜ್ಜಾಗಿದ್ದಾರೆ. ಈ ಬಗ್ಗೆ ಮಂಸೋರೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.

16ನೇ ಶತಮಾನದ ಐತಿಹಾಸಿಕ ಕಥೆಯನ್ನು ಪ್ಯಾನ್ ಇಂಡಿಯಾ ಸಿನಿಮಾ ಮಾಡಲಿದ್ದು 2023 ಕ್ಕೆ ಈ ಸಿನಿಮಾ ತೆರೆಕಾಣಲಿದೆ.

ರಾಣಿ ಅಬ್ಬಕ್ಕ ಕುರಿತ ಸಿನಿಮಾ ಮಾಡುವ ಆಲೋಚನೆ ಮೊದಲಿನಿಂದ ಇತ್ತು. ನಮ್ಮ ನೆಲದ ವೀರ ವನಿತೆ ರಾಣಿ ಅಬ್ಬಕ್ಕನನ್ನು ಜಗತ್ತಿಗೆ ಪರಿಚಯಿಸುವ ಆಸೆ ಇದೆ. ದೊಡ್ಡ ಮಟ್ಟದಲ್ಲಿ ಈ ಚಿತ್ರ ಮಾಡಲಿದ್ದೇವೆ ಎಂದಿದ್ದಾರೆ ಮಂಸೋರೆ.

ಯಾರೀ ಅಬ್ಬಕ್ಕ ರಾಣಿ?

ಅಬ್ಬಕ್ಕ ರಾಣಿ ಅಥವಾ ‘ಅಬ್ಬಕ್ಕ ಮಹಾದೇವಿ’ ತುಳುನಾಡಿನ ರಾಣಿಯಾಗಿದ್ದಳು. ಇವರು 16 ನೇ ಶತಮಾನದ ದ್ವಿತೀಯಾರ್ಧದಲ್ಲಿ ಪೋರ್ಚುಗೀಸರೊಡನೆ ಹೋರಾಡಿದಳು. ರಾಣಿಯು ದೇವಾಲಯಗಳ ನಗರಿ ಮೂಡುಬಿದಿರೆಯ ಪ್ರದೇಶವನ್ನಾಳಿದ ಚೌಟ ವಂಶಕ್ಕೆ ಸೇರಿದವಳು.
ಬಂದರು ನಗರಿ ಉಳ್ಳಾಲವು ರಾಜಧಾನಿಯಾಗಿದ್ದಿತು. ಆಯಕಟ್ಟಿನ ಪ್ರದೇಶವಾದ ಉಳ್ಳಾಲವನ್ನು ವಶಪಡಿಸಿಕೊಳ್ಳಲು ಪೋರ್ಚುಗೀಸರು ಅನೇಕ ಯತ್ನಗಳನ್ನು ನಡೆಸಿದರು. ಆದರೆ ರಾಣಿಯು ಅವರ ಪ್ರಯತ್ನವನ್ನು ನಾಲ್ಕು ದಶಕಗಳ ಕಾಲ ಹಿಮ್ಮೆಟ್ಟಿಸಿದಳು. ಅವಳ ಧೈರ್ಯದಿಂದಾಗಿ ಅಭಯ ರಾಣಿ ಎಂದು ಹೆಸರಾಗಿದ್ದಳು ವಸಾಹತುಶಾಷಿಗಳ ವಿರುದ್ಧ ಹೋರಾಡಿದ ಮೊದಲ ಭಾರತೀಯರಲ್ಲಿ ಒಬ್ಬಳು ಮತ್ತು ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ.

LEAVE A REPLY

Please enter your comment!
Please enter your name here