ಅಮ್ಮಾ ತಾಯೇ.. ಜಗತ್ತಿನಲ್ಲಿ ಲಕ್ಷಾಂತರ ಮಂದಿಯನ್ನು ಬಲಿ ಪಡೆದ ಕೊರೋನಮ್ಮ ಇನ್ನಾದರೂ ಶಾಂತಿಸು.. ಕೊರೋನಾ ವಿರುದ್ದ ಹೋರಾಟ ಮಾಡ್ತಿರುವ ವೈದ್ಯರು,ಪೊಲೀಸ್ರು, ಮೀಡಿಯಾ ಸಿಬ್ಬಂದಿಯನ್ಜು ಕಾಪಾಡು… ವ್ಯಾಕ್ಸಿನ್ ಕಂಡುಹಿಡಿಯಲು ಶ್ರಮಿಸುತ್ತಿರುವ ಸಂಶೋಧಕರ ಮೇಲೆ ಕರುಣೆ ತೋರು.. ಯಾರಿಗೂ ಹಾನಿ ಉಂಟು ಮಾಡ್ಬೇಡಮ್ಮ ಕೊರೋನಾ ತಾಯಿ…
ಹೀಗಂತ ಪ್ರಾರ್ಥಿಸಿ ಕೊರೋನಾ ವೈರಸ್ ವಿಗ್ರಹಕ್ಕೆ ಕೇರಳದ ಕಡಕ್ಕಲ್ ನ ಅನಿಲನ್ ಎಂಬಾತ ನಿತ್ಯ ಪೂಜೆ ಮಾಡ್ತಿದ್ದಾರೆ. ಥರ್ಮಕಲ್ ನಿಂದ ಮಾಡಿದ ಕೊರೋನಾ ವಿಗ್ರಹಕ್ಕೆ ಅನಿಲನ್ ನಿತ್ಯ ಪೂಜೆ ಮಾಡುತ್ತಿರುವ ಚಿತ್ರ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಅಗಿದೆ.
ಪಬ್ಲಿಸಿಟಿಗಾಗಿ ಅನಿಲನ್ ಪೂಜೆ ಡ್ರಾಮಾ ಮಾಡ್ತಿದ್ದಾರೆ ಎಂಬ ಟೀಕೆಗಳು ಕೇಳಿಬರುತ್ತಿವೆ. ಇನ್ನೂ ಕೆಲವರು ಮೌಢ್ಯ ಹೆಚ್ಚಾಗುತ್ತಿದೆ ಎಂಬ ವಿಮರ್ಷೆಗಳು ಕೇಳಿಬರುತ್ತಿವೆ.
ಆದರೆ, ತಾನು ಇದಕ್ಕೆಲ್ಲಾ ತಲೆಕೆಡಿಕೊಳ್ಳೋನು ನಾನಲ್ಲ.ಕೊರೋನಮ್ಮ ಪೂಜೆ ಮೂಲಕ ಜನರಲ್ಲಿ ಜಾಗೃತಿ ಮುಡಿಸುತ್ತೇನೆ.ಮುಕ್ಕೋಟಿ ದೇವತೆಗಳ ಪೈಕಿ ಕೊರೋನಮ್ಮ ದೇವತೆಯೂ ಒಬ್ಬರು ಎಂದು ಅನಿಲನ್ ಹೇಳುತ್ತಾರೆ.