ಅಮೇಜಾನ್ ನಿಂದ ಬೆಂಗಳೂರಿನಲ್ಲಿ ಫುಡ್‌ ಡೆಲಿವರಿ ಸೇವೆ ಆರಂಭ

ಇ-ಕಾಮರ್ಸ್ ದೈತ್ಯ ಅಮೆಜಾನ್ ಇದೀಗ ಫುಡ್ ಡೆಲಿವರಿ ತನ್ನ ಸೇವೆಯನ್ನು ವಿಸ್ತರಿಸಿದೆ, ಅಮೆಜಾನ್ ಫುಡ್‌  ಎಂಬ ಡೆಲಿವರಿ ಸೇವೆಯನ್ನು ಆರಂಭಿಸಿದ್ದು, ಬೆಂಗಳೂರಿನ ಕೆಲವು ಆಯ್ದ ಪಿನ್‌ ಕೋಡ್ ಗಳಲ್ಲಿ ಸಿದ್ಧಪಡಿಸಿದ ಆಹಾರವನ್ನು ತನ್ನ ಗ್ರಾಹಕರಿಗೆ ತಲುಪಿಸಲಿದೆ.

ಅಮೇಜಾನ್ ನಲ್ಲಿ ವ್ಯವಹರಿಸುವ ಗ್ರಾಹಕರು ಸಿದ್ಧಪಡಿಸಿದ ಆಹಾರ ಪೂರೈಕೆ ವ್ಯವಸ್ಥೆಗೂ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಈ ಸೇವೆಯನ್ನು ಪ್ರಾರಂಭಿಸಲಾಗಿದೆ ಎಂದು ಅಮೇಜಾನ್ ವಕ್ತಾರರು ತಿಳಿಸಿದ್ದಾರೆ.

ಬೆಂಗಳೂರಿನ ಆಯ್ದ ಪಿನ್‌ ಕೋಡ್‌ಗಳಲ್ಲಿ ಸೇವೆಯನ್ನು ಪ್ರಾರಂಭಿಸಿದ್ದು  ತಾನು ನಿಗದಿಪಡಿಸಿರುವ ಅತ್ಯುತ್ತಮವಾದ ಮತ್ತು ಉನ್ನತ ನೈರ್ಮಲ್ಯ” ಪ್ರಮಾಣೀಕರಣವನ್ನು ದೃಢೀಕರಿಸಿದ ಕೆಲವೇ ಕೆಲವು ಸ್ಥಳೀಯ ರೆಸ್ಟೋರೆಂಟ್ ಗಳಿಂದ ಆಹಾರ ಪೂರೈಕೆ ಮಾಡುತ್ತದೆ.

ಈಗಾಗಲೇ ಬೆಂಗಳೂರಿನ ಬೆಳ್ಳಂದೂರು, ಮಾರತ್ ಹಳ್ಳಿ ಮತ್ತು ವೈಟ್ ಫೀಲ್ಡ್ ನಲ್ಲಿ ಅಮೇಜಾನ್‌ ಫುಡ್‌ ಡೆಲಿವರಿ ಸೇವೆ ಆರಂಭವಾಗಿದ್ದು ನಗರದ ಉಳಿದ ಭಾಗಗಳಿಗೆ ತನ್ನ ಸೇವೆಯನ್ನು ವಿಸ್ತರಿಸುತ್ತದೆಯೋ ಎಂಬುದರ ಬಗ್ಗೆ ಸ್ಪಷ್ಟವಾಗಿಲ್ಲ.

LEAVE A REPLY

Please enter your comment!
Please enter your name here