ಅಮೆರಿಕಾದಲ್ಲಿ ದಂಗೆ.. ಸಿಕ್ರೆಟ್ ಬಂಕರ್ ನಲ್ಲಿ ಅವಿತುಕೊಂಡ ಟ್ರಂಪ್..

ಅಮೆರಿಕಾ ಅಧ್ಯಕ್ಷರ ಅಧಿಕೃತ ನಿವಾಸ ಶ್ವೇತಭವನ

ಆಫ್ರಿಕನ್ ಅಮೆರಿಕನ್ ಜಾರ್ಜ್ ಫ್ಲಾಯ್ಡ್‌ ಹತ್ಯೆ ಬಳಿಕ ಅಮೆರಿಕಾ ಹೊತ್ತಿ ಉರಿಯುತ್ತಿದೆ. ಐ ಕಾಂಟ್ ಬ್ರೀತ್ ಹೆಸರಿನಲ್ಲಿ ನಡೆಯುತ್ತಿರುವ ಚಳವಳಿ ಉಗ್ರ ಸ್ವರೂಪ ಪಡೆದುಕೊಂಡಿದ್ದು, ಅದರ ಬಿಸಿ ಅಮೆರಿಕಾ ಅಧ್ಯಕ್ಷರ ಅಧಿಕೃತ ನಿವಾಸ ಶ್ವೇತಭವನಕ್ಕೂ ತಾಕಿದೆ. ಇದರಿಂದ ಸ್ವತಃ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಚ್ಚಿಬಿದ್ದಾರೆ.

ಸುರಕ್ಷತೆ ದೃಷ್ಟಿಯಿಂದ ಅಮೆರಿಕಾದ ಸೀಕ್ರೆಟ್ ಸರ್ವೀಸ್ ಏಜೆಂಟ್‌ಗಳು ಟ್ರಂಪ್ ಅವರನ್ನು ಶ್ವೇತಭವನದ ನೆಲಮಾಳಿಗೆಯಲ್ಲಿ ನಿರ್ಮಿಸಿರುವ ಸೀಕ್ರೆಟ್ ಬಂಕರ್‌ನಲ್ಲಿ ಇರಿಸಿದೆ.

ಇದೇ ಸೀಕ್ರೆಟ್ ಬಂಕರ್‌ನಲ್ಲಿ ಅಮೆರಿಕಾ ಉಪಾದ್ಯಕ್ಷ ಡಿಕ್ ಚಿನಿ ಕೂಡ ಇದ್ದಾರೆ ಎಂದು “ನ್ಯೂಯಾರ್ಕ್ ಟೈಮ್ಸ್” ವರದಿ ಮಾಡಿದೆ.
ಕ್ಷಣ ಕ್ಷಣಕ್ಕೂ ಪ್ರತಿಭಟನೆ ತೀವ್ರಸ್ವರೂಪ ಪಡೆಯುತ್ತಿದ್ದೂ, ಪರಿಸ್ಥಿತಿ ಕೈಮೀರುತ್ತಿದೆ.

ಕಂಡಕಂಡಲ್ಲಿ ಬೆಂಕಿ ಹಚ್ಚುವ ಕೆಲಸ ನಡೆಯುತ್ತಿದೆ. ಹಿಂಸಾಚಾರ ಹತ್ತಿಕ್ಕಲು ನ್ಯಾಷನಲ್ ಗಾರ್ಡ್ಸ್ ರಸ್ತೆಗೆ ಇಳಿದಿದ್ರು ಪ್ರಯೋಜನ ಆಗಿಲ್ಲ. ವಾಷಿಂಗ್ಟನ್‌ ಡಿಸಿಯಲ್ಲಿ ಹಿಂಸೆ ಜೋರಾಗಿದೆ.

ಪರಿಣಾಮ ಅಮೆರಿಕಾ ರಾಜಧಾನಿ ವಾಷಿಂಗ್ಟನ್‌ ಡಿಸಿ ಸೇರಿ 40 ನಗರಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಇದೆಲ್ಲಾ ಏನೇ ಇರಲಿ,ಎಲ್ಲರನ್ನು ಬೆದರಿಸುವ ಶಕ್ತಿ ಇರುವ ಅಮೆರಿಕಾ ಅಧ್ಯಕ್ಷರೇ ಸ್ವತಃ ಬೆದರಿದ್ದಾರೆ.

LEAVE A REPLY

Please enter your comment!
Please enter your name here