ಅಬ್ಬಾ ಕೊನೆಗೂ ತಿರುಪತಿ ತಿಮ್ಮಪ್ಪನ ಆಸ್ತಿ ಉಳೀತು..!

ತಿರುಪತಿ ತಿರುಮಲ ದೇವಸ್ಥಾನ ಆಡಳಿತ ಮಂಡಳಿಗೆ ಸೇರಿದ ಆಸ್ತಿಗಳ ಮಾರಾಟಕ್ಕೆ ಮುಂದಾಗಿದ್ದ ಆಂಧ್ರ ಪ್ರದೇಶ ಸರ್ಕಾರ ವ್ಯಾಪಕ ಟೀಕೆಗಳ ಬಳಿಕ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ.

ಆಂಧ್ರಪ್ರದೇಶದ ಸರ್ಕಾರದ ಸೂಚನೆ ಮೇರೆಗೆ ಟಿಟಿಡಿಗೆ ಸೇರಿದ ತಮಿಳುನಾಡಿನಲ್ಲಿರುವ 50 ಆಸ್ತಿಗಳನ್ನು ಮಾರಾಟ ಮಾಡಲು ನಿರ್ಧರಿಸಲಾಗಿತ್ತು.

ಆದರೆ, ಭಕ್ತರಿಂದ ವ್ಯಾಪಕ ಟೀಕೆ, ಆಕ್ರೋಶ ವ್ಯಕ್ತವಾದ ಕಾರಣ, ಅವರ ಮನೋಭಾವಗಳನ್ನು ಗಮನದಲ್ಲಿರಿಸಿಕೊಂಡು ತಿಮ್ಮಪ್ಪನ ಆಸ್ತಿಗಳನ್ನು ಮಾರಾಟ ಮಾಡುವ ನಿರ್ಣಯದಿಂದ ಹಿಂದೆ ಸರಿಯಿತು.

ಈ ಸಂಬಂಧ ಧರ್ಮಗುರುಗಳು, ಗುರು ಹಿರಿಯರು, ಧಾರ್ಮಿಕ ಸಂಸ್ಥೆಗಳು, ಭಕ್ತರ ಅಭಿಪ್ರಾಯ ಪಡೆದು ಮುಂದಿನ ದಿನಗಳಲ್ಲಿ ಟಿಟಿಡಿ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸರ್ಕಾರ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here