ಅಬ್ಬಾ..! ಕಸದಲ್ಲಿ ನಾಲ್ಕು ಕೋಟಿ..

ದೇಶದ ಕ್ಲೀನೆಸ್ಟ್ ಸಿಟಿ ಪುರಸ್ಕಾರಕ್ಕೆ ಪಾತ್ರವಾದ ಮಧ್ಯಪ್ರದೇಶದ ಇಂದೋರ್ ಮತ್ತೆ ಸುದ್ದಿಯಲ್ಲಿದೆ. ಇಂದೋರ್ ನಗರ ಪಾಲಿಕೆ ಕಸದಿಂದ ಕೋಟಿ ಕೋಟಿ ಹಣ ಗಳಿಸುತ್ತಿದೆ. ಕಸವನ್ನು ಸದ್ವಿನಿಯೋಗ ಮಾಡಿಕೊಂಡ ಇಂದೋರ್ ಮಹಾನಗರ ಪಾಲಿಕೆ ವರ್ಷಕ್ಕೆ 4 ಕೋಟಿ ಗಳಿಸುತ್ತಿದೆ ಅಂದ್ರೆ ನೀವು ನಂಬಲೇಬೇಕು.

ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಒಂದು ಖಾಸಗಿ ಕಂಪನಿ 30 ಕೋಟಿ ಹೂಡಿಕೆ ಮಾಡಿದ್ದು, ರೋಬೋ ಟೆಕ್ನಾಲಜಿ ಬಳಸಿಕೊಂಡು ತ್ಯಾಜ್ಯವನ್ನು 3 ಭಾಗಗಳಾಗಿ ವಿಂಗಡಿಸುತ್ತದೆ. ಪ್ಲಾಸ್ಟಿಕ್, ಗಾಜು, ಲೋಹಗಳನ್ನು ಬೇರೆ ಬೇರೆ ಮಾಡಿ ಕಾರ್ಖಾನೆಗಳಿಗೆ ಮಾರಾಟ ಮಾಡಲಾಗುತ್ತದೆ.

ತೇವದಿಂದ ಕೂಡಿದ ತ್ಯಾಜ್ಯದಿಂದ ಬಯೋ ಸಿಎನ್‍ಜಿಯನ್ನು ನಗರ ಪಾಲಿಕೆ ಉತ್ಪಾದನೆ ಮಾಡುತ್ತಿದೆ. ಜೊತೆಗೆ ಕಟ್ಟಡ ನಿರ್ಮಾಣ ವಲಯದ ತ್ಯಾಜ್ಯದಿಂದ ಇಟ್ಟಿಗೆ, ಕಲ್ಲುಗಳನ್ನು ತಯಾರು ಮಾಡಿ ಮಾರಾಟ ಮಾಡುತ್ತದೆ. ಈ ಮೂರು ಕ್ರಮಗಳಿಂದ ವಾರ್ಷಿಕ 4 ಕೋಟಿ ಹಣವನ್ನು ಇಂದೋರ್ ನಗರಸಭೆ ಗಳಿಸುತ್ತಿದೆ.

ಕಸ ಕೊಟ್ಟವರಿಗೆ ಒಂದು ಕೆಜಿಗೆ 2.50 ರೂಪಾಯಿ ಹಣ ಕೂಡ ನೀಡುತ್ತಿದೆ ಇಂದೋರ್ ನಗರಸಭೆ. ಕಸದ ಹೆಸರಲ್ಲಿ ಕೋಟಿ ಕೋಟಿ ಹಣವನ್ನು ವ್ಯರ್ಥ ಮಾಡುವ ಬಿಬಿಎಂಪಿ ಒಮ್ಮೆ ಇಂದೋರ್ ನಗರಸಭೆಯ ಯಶೋಗಾಥೆಯನ್ನು ಗಮನಿಸಬೇಕು.

LEAVE A REPLY

Please enter your comment!
Please enter your name here