ಅನ್ ಲಾಕ್ 3.0: ಜುಲೈ 5 ರಿಂದ ವಂಡರ್‌ ಲಾ ಪ್ರಾರಂಭ

Wonderla Offer

ಬೆಂಗಳೂರು: ಲಾಕ್‌ಡೌನ್‌ ಸಡಿಲಿಕೆ ಬಳಿಕ ಜುಲೈ 5 ರಿಂದ ವಂಡರ್‌ ಲಾ ಅಮ್ಯೂಸ್ಮೆಂಟ್‌ ಪಾರ್ಕ್‌ನನ್ನು ಶೇ.50 ರಷ್ಟು ತೆರೆಯುವುದಾಗಿ ವಂಡರ್‌ಲಾ ಹಾಲಿಡೇಸ್ ತಿಳಿಸಿದೆ.

ಕಳೆದ ಎರಡು ತಿಂಗಳಿನಿಂದ ಲಾಕ್‌ಡೌನ್‌ನಿಂದಾಗಿ ವಂಡರ್‌ಲಾ ಪಾರ್ಕ್‌ನನ್ನು ಮುಚ್ಚಲಾಗಿತ್ತು. ಇದೀಗ ಸರ್ಕಾರ ರೆಸ್ಟೋರೆಂಟ್ ಹಾಗೂ ಅಮ್ಯೂಸ್ಮೆಂಟ್‌ ಪಾರ್ಕ್‌ಗಳಿಗೆ ಶೇ.50 ರಷ್ಟು ಸಾಮರ್ಥ್ಯದಲ್ಲಿ ತೆರೆಯಲು ಅವಕಾಶ ನೀಡಿದೆ.

ಜನರ ಆರೋಗ್ಯದ ಹಿತದೃಷ್ಟಿಯಿಂದ ಎಲ್ಲಾ ಸುರಕ್ಷತೆಯವನ್ನು ಹಾಗೂ ಸರ್ಕಾರದ ಕೋವಿಡ್‌ ಮಾರ್ಗಸೂಚಿಯನ್ನು ಕಟ್ಟುನಿಟ್ಟಿನಿಂದ ಪಾಲಿಸಲಿದೆ ಎಂದು ವಂಡೆರ್‌ಲಾ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕೆ. ಚಿಟ್ಟಿಲಾಪಿಲ್ಲಿ ಹೇಳಿದ್ದಾರೆ.

ಲಾಕ್‌ಡೌನ್‌ ವೇಳೆ ಟಿಕೆಟ್ ಪಡೆದವರಿಗೆ ಶೇ.50 ರಷ್ಟು ಆಫರ್ ಘೋಷಣೆ ಮಾಡಿತ್ತು. ಆ ಸಂದರ್ಭದಲ್ಲಿ ನೋಂದಣಿ ಮಾಡಿಕೊಂಡು, ಟಿಕೆಟ್ ಪಡೆದವರು ಅದರ ಪ್ರಯೋಜನವನ್ನು ಈಗ ಪಡೆದುಕೊಳ್ಳಬಹುದು.

LEAVE A REPLY

Please enter your comment!
Please enter your name here