ಅನ್ನದಾತನಿಗೆ `ವಜ್ರ’ದ ಫಸಲು.. 30 ಲಕ್ಷ ಕಾಸು..!

ಆಂಧ್ರಪ್ರದೇಶದ ರಾಯಲಸೀಮಾ ವ್ಯಾಪ್ತಿಗೆ ಬರುವ,ಅನಂತಪುರ ಜಿಲ್ಲೆಯ ರೈತರೊಬ್ಬರು ವಜ್ರದ ಫಸಲು ತೆಗೆದಿದ್ದಾರೆ. ಇದೇನು ವಜ್ರದ ಫಸಲು ಎನ್ನಬೇಡಿ. ಗುತ್ತಿ ಮಂಡಲಂನ ಬೇತಪಲ್ಲಿಯ ರೈತರೊಬ್ಬರಿಗೆ ಜಮೀನಿನಲ್ಲಿ ಉಳುಮೆ ಮಾಡುವ ಸಂದರ್ಭದಲ್ಲಿ 1 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ವಜ್ರ ಸಿಕ್ಕಿದೆ. ಅದನ್ನು ಚಿನ್ನಾಭರಣ ವ್ಯಾಪಾರಿಯೊಬ್ಬರಿಗೆ 30 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.

ಕಳೆದ ನಾಲ್ಕು ದಿನಗಳ ಹಿಂದೆ ಒಳ್ಳೆ ಮಳೆ ಆಗಿತ್ತು. ಹೀಗಾಗಿ ರೈತ ಕೃಷಿ ಕೆಲಸಕ್ಕೆ ಮುಂದಾಗಿದ್ದರು. ಜಮೀನು ಉಳುವ ಸಂದರ್ಭದಲ್ಲಿ ಭೂಮಿಯಲ್ಲಿ ಥಳಥಳ ಹೊಳೆಯುವ ವಜ್ರ ಸಿಕ್ಕಿದೆ. ಇದನ್ನು ಗೌಪ್ಯವಾಗಿ ಕರ್ನೂಲ್‍ಗೆ ತೆಗೆದುಕೊಂಡ ಹೋದ ರೈತ, ಮಾರಾಟ ಮಾಡಲು ನೋಡಿದ್ದಾರೆ. ಆದರೆ, ಕಡಿಮೆ ಬೆಲೆ ಕೇಳಿದ ಹಿನ್ನೆಲೆಯಲ್ಲಿ ಮತ್ತೆ ಗುತ್ತಿ ಪಟ್ಟಣಕ್ಕೆ ಮರಳಿದ ರೈತ ಚಿನ್ನಾಭರಣ ವ್ಯಾಪಾರಿಯೊಬ್ಬರಿಗೆ 30 ಲಕ್ಷಕ್ಕೆ ವಜ್ರವನ್ನು ಮಾರಾಟ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಇದರ ನಿಜವಾದ ಮೌಲ್ಯ 1 ಕೋಟಿಯನ್ನು ದಾಟುತ್ತದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here