ಅಧರಕ್ಕೂ-ಉದರಕ್ಕೂ ಸಿಹಿ ಈ ಕವಳಿ ಹಣ್ಣು

ಅಂಕೋಲಾ ಜಿಲ್ಲೆಯ ಬುಡಕಟ್ಟು ಜನಾಂಗದ ಜಾನಪದದ ಕಣಜ ಎಂದೇ ಗುರುತಿಸಲ್ಪಡುವ ಹಾಲಕ್ಕಿ ಮಹಿಳೆಯೊಬ್ಬರು ಕೈಗಳಿಗೆ ಗ್ಲೌಸ್‌, ಮುಖಕ್ಕೆ ಮಾಸ್ಕ್‌ ಹಾಕಿ ಬಿದಿರಿನ ಬುಟ್ಟಿ ತುಂಬಾ ಕವಳಿ (ಕೌಳಿ) ಹಣ್ಣು ಹೊತ್ತುಕೊಂಡು ಮಾರುತ್ತಿರುವ ದೃಶ್ಯ ಉತ್ತರಕನ್ನಡ ಜಿಲ್ಲೆಯ ಆಂಕೋಲಾ ತಾಲೂಕಿನ ಬೆಳಸೆ ಎಂಬ ಹಳ್ಳಿಯೊಂದರ ಬಸ್‌ ಸ್ಟಾಂಡ್‌ ನಲ್ಲಿ ಕಂಡುಬಂದಿತು.

ಅಂದ ಹಾಗೆ ಅಡವಿಯಲ್ಲಿ ನೈಸರ್ಗಿಕವಾಗಿ ಬೆಳೆಯುವ ಈ ಕವಳೆಹಣ್ಣು  ಅಂದರೆ ಎಲ್ಲರಿಗೂ ಇಷ್ಟ. ಬಹುಪಯೋಗಿ ಮತ್ತು ಅತಿ ಹೆಚ್ಚು ವಿಟಮಿನ್‌ ಇರುವ ಈ ಹಣ್ಣಿಗೆ ಬೇಡಿಕೆ ಹೆಚ್ಚಿದೆ.

ಚಿತ್ರ : ರಂಜಿತಾ

ಬೇಸಿಗೆಯ ಕಾಲದಲ್ಲಿ ಮಾರ್ಚ್ ತಿಂಗಳಿನಿಂದ ಮೇ-ಜೂನ್ ವರೆಗೂ ಕರಂಡೆ ಹಣ್ಣು ದೊರೆಯುತ್ತದೆ. ಕರಂಡೆ ಹಣ್ಣು ನೋಡಲು ಕಪ್ಪು ದ್ರಾಕ್ಷಿಯನ್ನು ಹೋಲುತ್ತದೆ. ಗಾತ್ರದಲ್ಲಿ ದ್ರಾಕ್ಷಿಗಿಂತ ಸ್ವಲ್ಪ ಸಣ್ಣಗಿರುವ ಈ ಹಣ್ಣು ಆಕಾರದಲ್ಲಿ ಗುಂಡಗಿರುತ್ತದೆ.

ಹೊಲದ ಬದುಗಳು, ಗುಡ್ಡ, ಮಣ್ಣಿನ ದಿನ್ನೆಗಳು ಇರುವ ಕಡೆ ನೈಸರ್ಗಿಕವಾಗಿಯೇ ಬೆಳೆಯುವ ಕವಳೆ ಕಂಟಿಯ ವೈಜ್ಞಾನಿಕ ಹೆಸರು ‘ಕ್ಯಾರಿಫಾ ಕರಂಡಾ’.

ಮುಳ್ಳುಗಳನ್ನು ಹೊಂದಿರುವ ಕಂಟಿಗಳಲ್ಲಿ ಬಿಡುವ ಹುಳಿಯಾದ ಕವಳೆಕಾಯಿ ಬಿಡಿಸಿಕೊಳ್ಳಲು ಗ್ರಾಮೀಣ ಜನರು ಮುಗಿಬೀಳುತ್ತಿದ್ದಾರೆ. ಕೆಲವರಿಗೆ ಇದುವೇ ಕಸುಬಾಗಿದೆ. ಕಾಯಿ ಇದ್ದಾಗ ಹಸಿರು ಬಣ್ಣದಿಂದ ಕಂಗೊಳಿಸುವ ಕವಳೆ, ಹಣ್ಣಾದಾಗ ಕಪ್ಪು ಬಣ್ಣಕ್ಕೆ ತಿರುಗುತ್ತದೆ.

ಕಾಯಿಯು ಪೂರ್ತಿ ಒಗರಾಗಿದ್ದು ತಿನ್ನಲು ಅಷ್ಟೇನೂ ಹಿತಕರವಲ್ಲ. ಮಾಗುತ್ತಿದ್ದಂತೆಯೇ ಹುಳಿಯಾಗುವ ಇದು ತಿನ್ನಲು ಯೋಗ್ಯವಾಗುತ್ತದೆ. ಪೂರ್ತಿ ಮಾಗಿದ ಹಣ್ಣು ಮಧುರವಾದ ಸಿಹಿ ರುಚಿಯನ್ನು ಹೊಂದಿದ್ದು ಸ್ವಲ್ಪ ಹುಳಿಯ ಛಾಯೆಯೂ ಇದ್ದು ತಿನ್ನಲು ಹಿತವಾಗಿರುತ್ತದೆ. ಕವಳೆಕಾಯಿಯಿಂದ ಚಟ್ನಿ ತಯಾರಿಸಲಾಗುತ್ತದೆ.

ಈ ಹಣ್ಣು ಮಾರಾಟದ ಮೂಲಕ ಹೆಚ್ಚಿನ ಆದಾಯ ಗಳಿಸುತ್ತಾರೆ. ಕವಳೆ ಕಂಟಿ ಮೇಕೆಗಳಿಗೆ ಇಷ್ಟ. ಕವಳೆಯಲ್ಲಿನ ಆರೋಗ್ಯವರ್ಧಕ ಗುಣಗಳ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ.

ಹಣ್ಣಿನಲ್ಲಿ ವಿಟಮಿನ್ ಸಿ ಇರುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ಈ ಹಣ್ಣು ಪಿತ್ಥ ನಿವಾರಕವೂ ಹೌದು. ಆದರೆ ಉಷ್ಣ ಗುಣವಿರುವ ಈ ಹಣ್ಣನ್ನು ಜಾಸ್ತಿ ತಿಂದರೆ ಹೊಟ್ಟೆ ನೋವು, ಅಜೀರ್ಣವಾಗುವ ಸಂಭವವಿದೆ. ಕರಂಡೆಯ ಹೆಚ್ಚಿನ ಉಪಯೋಗವಾಗುವುದು ಉಪ್ಪಿನಕಾಯಿ ತಯಾರಿಸಲು. ಕಾಯಿಯು ಹುಳಿಯಾಗಿರುವುದರಿಂದ ಇದರ ಉಪ್ಪಿನಕಾಯಿಯು ರುಚಿಕರವಾಗಿರುತ್ತದೆ.

ಕಾಯಿಯಲ್ಲಿ ಸಿಟ್ರಿಸ್‌ ಅಂಶ ಹೆಚ್ಚು ಇರುವುದರಿಂದ ಮಲಬದ್ಧತೆ ಸೇರಿದಂತೆ ಹೊಟ್ಟೆಗೆ ಸಂಬಂಧಿಸಿದ ಕೆಲ ಸಮಸ್ಯೆಗಳಿಗೆ ಔಷಧಿಯಾಗಿದೆ ಎಂದು ತಜ್ಞರು ಹೇಳುತ್ತಾರೆ.

LEAVE A REPLY

Please enter your comment!
Please enter your name here