ಅತ್ಯಾಚಾರ ಪ್ರಕರಣದ ಆರೋಪಿ ‘ಗುರ್ಮೀತ್ ರಾಮ್​ ರಹೀಮ್’​ಗೆ ಪೆರೋಲ್

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ವಾಸ ಅನುಭವಿಸುತ್ತಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ‘ಗುರ್ಮೀತ್‌ ರಾಮ್‌ ರಹೀಮ್‌’ ಅವರಿಗೆ ಮೂರು ವಾರಗಳ ಪೆರೋಲ್‌ ಮಂಜೂರು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹರಿಯಾಣದ ಗುರುಗ್ರಾಮ್‌ನಲ್ಲಿರುವ ಅವರ ಫಾರ್ಮ್‌ಹೌಸ್‌ನಲ್ಲಿ ಉಳಿಯಲು ಡೇರಾ ಮುಖ್ಯಸ್ಥರಿಗೆ ಅವಕಾಶ ನೀಡಲಾಗಿದೆ. ಅವರ ಕರ್ಮಭೂಮಿ ಸಿರ್ಸಾಗೆ ಭೇಟಿ ನೀಡಲು ಅವಕಾಶವನ್ನು ನಿರಾಕರಿಸಲಾಗಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.

‘ಗುರ್ಮೀತ್‌ ರಾಮ್‌ ರಹೀಮ್‌ ಸಿಂಗ್‌ ಅವರಿಗೆ ಫೆಬ್ರವರಿ 7 ರಿಂದ 20 ರವರೆಗೆ ಪೆರೋಲ್‌ ನೀಡಲಾಗಿದೆ. ಕುಟುಂಬ ಸದಸ್ಯರನ್ನು ಹೊರತುಪಡಿಸಿ, ಡೇರಾ ಮುಖ್ಯಸ್ಥರು ಯಾರನ್ನೂ ಭೇಟಿಯಾಗಲು ಅನುಮತಿ ಇಲ್ಲ. ಅವರನ್ನು ನಾವು ಇಂದು(ಸೋಮವಾರ) ಸಂಜೆಯೊಳಗೆ ಬಿಡುಗಡೆ ಮಾಡುತ್ತೇವೆ’ ಎಂದು ಜೈಲಿನ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇಬ್ಬರು ಮಹಿಳಾ ಅನುಯಾಯಿಗಳ ಮೇಲೆ ಅತ್ಯಾಚಾರ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರ್ಮೀತ್‌ ರಮ್‌ ರಹೀಂ ಸಿಂಗ್‌ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದು, ರೋಹ್ಟಕ್‌ನ ಸುನರಿಯಾ ಜೈಲುವಾಸದಲ್ಲಿದ್ದಾರೆ.

LEAVE A REPLY

Please enter your comment!
Please enter your name here