ಹೊಸ ವರ್ಷದಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜನಸಾಮಾನ್ಯರಿಗೆ ಆಘಾತದ ಮೇಲೆ ಆಘಾತದ ನೀಡಿದೆ. ರೈಲ್ವೆ ಟಿಕೆಟ್ ಪ್ರಯಾಣ ದರ ಏರಿಕೆ ಬೆನ್ನಲೇ ಅಡುಗೆ ಅನಿಲದ ದರವನ್ನೂ ಏಕ್ಧಮ್ ಏರಿಸಿಬಿಟ್ಟಿದೆ. ಇದರೊಂದಿಗೆ ಆಗಸ್ಟ್ ಬಳಿಕ ಸತತ ಐದು ತಿಂಗಳು ನಿರಂತರವಾಗಿ ಜಾಸ್ತಿ ಆಗಿದ್ದು, ಸಬ್ಸಿಡಿ ಇಲ್ಲದ ಗ್ಯಾಸ್ ಬೆಲೆ 140 ರೂಪಾಯಿಯಷ್ಟು ದುಬಾರಿ ಆಗಿದೆ.
ಇವತ್ತು ಸಬ್ಸಿಡಿ ರಹಿತ ಸಿಲಿಂಡರ್ ಬೆಲೆಯನ್ನು 19 ರೂಪಾಯಿಯಷ್ಟು ಹೆಚ್ಚಳ ಮಾಡಲಾಯ್ತು. ಐಒಸಿಎಲ್ ಮಾಹಿತಿಯ ಪ್ರಕಾರ ಸಬ್ಸಿಡಿ ಇಲ್ಲದ ಸಿಲಿಂಡರ್ (14.3 ಕೆಜಿ ತೂಕದ ಮತ್ತು ನೇರ ನಗದು ವರ್ಗಾವಣೆ ಯೋಜನೆಯಡಿ ಸಿಗುವ ಸಿಲಿಂಡರ್ ಒಳಗೊಂಡು) ದೆಹಲಿಯಲ್ಲಿ 714 ರೂ., ಮುಂಬೈನಲ್ಲಿ 747 ರೂ., ಮುಂಬೈನಲ್ಲಿ 684 ರೂ., ಚೆನ್ನೈನಲ್ಲಿ 734 ರೂ. ಆಗಿದೆ.
ವಿಮಾನಗಳಿಗೆ ಬಳಸುವ ಏರ್ ಟರ್ಬೈನ್ ಫ್ಯೂಲ್ (ಎಟಿಎಫ್) ಅಥವಾ ಗ್ಯಾಸೋಲಿನ್ ದರವೂ ದೇಶಿಯ ವಿಮಾನಗಳಿಗೆ ಲೀಟರ್ಗೆ 1,630 ರೂಪಾಯಿ ಅಂದರೆ ಶೇಕಡಾ 2.6ರಷ್ಟು ಹೆಚ್ಚಳವಾಗಿದೆ. ಅಂತಾರಾಷ್ಟ್ರೀಯ ವಿಮಾನಳಿಗೆ 15.25ಡಾಲರ್ನ್ನಷ್ಟು ದುಬಾರಿ ಆಗಿದೆ.
ಪೆಟ್ರೋಲ್-ಡೀಸೆಲ್ ಬೆಲೆಯನ್ನು ಪ್ರತಿದಿನವೂ ಪರಿಷ್ಕರಣೆ ಮಾಡಿದರೆ ಅಡುಗೆ ಅನಿಲದ ಬೆಲೆಯನ್ನೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಮತ್ತು ಡಾಲರ್-ರೂಪಾಯಿ ವಿನಿಮಯ ಮೌಲ್ಯ ಆಧರಿಸಿ ಪ್ರತಿ ತಿಂಗಳಿಗೊಮ್ಮೆ ಪರಿಷ್ಕರಣೆ ಮಾಡಲಾಗುತ್ತದೆ.