ಭಾರತಕ್ಕೆ ಸ್ವಾತಂತ್ರ್ಯ ಬಂದಾಗ 500ಕ್ಕೂ ಹೆಚ್ಚು ಸಂಸ್ಥಾನಗಳಿದ್ದವು, ಒಂದೊಂದೂ ಮತ್ತೊಂದಕ್ಕಿಂತ ಭಿನ್ನ ಭಾಷೆ, ಭಿನ್ನ ಸಂಸ್ಕೃತಿಯವು ಇಂತಹ ಸಂಸ್ಥಾನಗಳ ಮನವೊಲಿಸಿ ಭೌತಿಕವಾಗಿ ಒಂದು ದೇಶವನ್ನಾಗಿಸಿದರು ಸರ್ದಾರ್ ವಲ್ಲಭಭಾಯಿ ಪಟೇಲ್. ಇಡೀ ಪ್ರಪಂಚ ಭಾರತ ಯಾವಾಗ ಛಿದ್ರ ಆಗುತ್ತೆ ಅಂತ ಕಾಯುತ್ತಿತ್ತು. ಆದರೆ ದಿನಗಳೆದಂತೆ ಭಾರತ ಒಂದುಗೂಡುತ್ತಾ ಹೋಯಿತು ಭೌತಿಕವಾಗಿಯೂ ಮಾನಸಿಕವಾಗಿಯೂ…
ಇವತ್ತು ಭಾರತ ಒಂದಾಗಿ ಉಳಿಯಲಿಕ್ಕೆ ಕಾರಣ ಒಂದು ಪುಸ್ತಕ, ಅದು ಯಾವುದೇ ಧರ್ಮಗ್ರಂಥ ಅಲ್ಲ ಆದರೆ ಧರ್ಮಗ್ರಂಥಗಳಿಗಿಂತ ಪವಿತ್ರವಾದದ್ದು . ಅದರ ಹೆಸರು ”ಸಂವಿಧಾನ” ಇದರ ಶಿಲ್ಪಿ ಬಾಬಾಸಾಹೇಬ್ ಭೀಮ್ರಾವ್ ಅಂಬೇಡ್ಕರ್. ಸಂವಿಧಾನದಿಂದಾಗಿ ಇವತ್ತು ಭಾರತ ದೇಶವಾಗಿ ಉಳಿದಿದೆ. ಇವತ್ತು ಭಾರತದ ಏಕತೆಗೆ ನಾವು ಆಭಾರಿಯಾಗಬೇಕಿರುವುದು ಅಂಬೇಡ್ಕರ್ರವರಿಗೆ.
ಬಾಬಾಸಾಹೇಬ್ ಕೇವಲ ದಲಿತರ ಹಕ್ಕಿನ ಹೋರಾಟಗಾರರಾಗಿರಲಿಲ್ಲ. ಅವರು ಮಹಿಳೆಯರ ಹಕ್ಕಿಗಾಗಿ ಹೋರಾಡಿದರು. ರೈತರ ಹಕ್ಕಿಗಾಗಿ ಕಷ್ಟಪಟ್ಟರು.ನಮ್ಮಲ್ಲಿ ಎಷ್ಟೋ ಜನಕ್ಕೆ ಗೊತ್ತಿಲ್ಲ ರಿಸರ್ವ್ ಬ್ಯಾಂಕ್ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದವರು ಡಾ.ಬಾಬಾಸಾಹೇಬ್ ಅಂಬೇಡ್ಕರ್.
ಅಂಬೇಡ್ಕರ್ ಬರೀ ಕಾನೂನು ಪಂಡಿತರು ಮಾತ್ರ ಅಲ್ಲ ಅವರು ಜಗತ್ಪ್ರಸಿದ್ಧ ಅರ್ಥಶಾಸ್ತ್ರಜ್ಞರೂ ಕೂಡ ಆಗಿದ್ದರು. ಅಪಾರ ಬಡತನ,ಅಸ್ಪೃಶ್ಯತೆ ಎಲ್ಲವನ್ನೂ ಎದುರಿಸಿ ಬಾಬಾಸಾಹೇಬ್ ಬೃಹದಾಕಾರವಾಗಿ ಬೆಳೆದರು. ಆಗರ್ಭ ಶ್ರೀಮಂತರಿಗೂ ಅಗಾಧ ಬುದ್ದಿವಂತರಿಗೂ ಅತ್ಯುತ್ತಮ ಶಿಕ್ಷಣ ಪಡೆಯಲು ಕಷ್ಟವಿದ್ದ ಕಾಲದಲ್ಲಿ ಅಂಬೇಡ್ಕರ್ ಎರಡೆರಡು ಪಿಎಚ್ಡಿ ಪಡೆದರು. ಇವತ್ತಿಗೂ 2019ರಲ್ಲೂ ಕೊಲಂಬಿಯಾ ವಿಶ್ವವಿದ್ಯಾಲಯ ಮತ್ತು ಲಂಡನ್ ಸ್ಕೂಲ್ ಆಫ್ ಎಕಾನಾಮಿಕ್ಸ್ ಎರಡರಲ್ಲೂ ಪಿಎಚ್ಡಿ ಪಡೆದ ಮೇಧಾವಿಗಳು ಎಲ್ಲೂ ಸಿಗುವುದಿಲ್ಲ.
ಇದು ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾಡಿದ ಭಾಷಣದ ತೆಳು ಅನುವಾದ.ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರ ಡಾ| ಬಾಬಾಸಾಹೇಬ್ ಅಂಬೇಡ್ಕರ್ರವರ ಬಗ್ಗೆ ಬರೀ ಪಾಠ ಅಲ್ಲ, ಡಾ| ಅಂಬೇಡ್ಕರ್ ಬದುಕು- ಬರಹ -ಸಾಧನೆ-ಸಂದೇಶಗಳು ಅಂತ ಪಠ್ಯಕ್ರಮವನ್ನೇ ರಚಿಸಿದೆ. ಅಂಬೇಡ್ಕರ್ರವರನ್ನು ಅರ್ಥಮಾಡಿಕೊಳ್ಳಲು ಇದು ಬಹಳ ಸಹಕಾರಿ.
-ದರ್ಶನ್ ಜೈನ್
ಅರವಿಂದ್ ಕೇಜ್ರಿವಾಲ್ ಮಾಡಿರುವ ಮೂರು ನಿಮಿಷದ ಭಾಷಣ ಇಲ್ಲಿದೆ:
ಚೆನ್ನಾಗಿ ಮೂಡಿ ಬರುತ್ತಿದೆ.