ಅಂಡರ್ 19 ವಿಶ್ವಕಪ್.. ಭಾರತಕ್ಕೆ ನಿರಾಸೆ.. ಬಾಂಗ್ಲಾ ನೂತನ ಚಾಂಪಿಯನ್

ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಬಾಂಗ್ಲಾದೇಶ ಗೆದ್ದು ಚಾಂಪಿಯನ್ ಪಟ್ಟಕ್ಕೇರಿದೆ. ಬಾಂಗ್ಲಾದೇಶ ಗೆಲ್ಲಲು 15 ರನ್‍ಗಳ ಅಗತ್ಯವಿದ್ದಾಗ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಹೀಗಾಗಿ ಡಕ್‍ವರ್ತ್ ಲೂಯೀಸ್ ಅನ್ವಯ ಬಾಂಗ್ಲಾದೇಶ 3 ವಿಕೆಟ್‍ಗಳ ಅಂತರದಿಂದ ಗೆಲುವು ಸಾಧಿಸಿತು.

ಟಾಸ್ ಗೆದ್ದ ಬಾಂಗ್ಲಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 47.2 ಓವರ್‍ಗಳಲ್ಲಿ 177 ರನ್‍ಗಳಿಗೆ ಆಲೌಟ್ ಆಯಿತು. ಭಾರತದ ಪರ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 88 ರನ್ ಗಳಿಸಿ ಅಬ್ಬರಿಸಿದರು. ತಿಲಕ್ ವರ್ಮಾ 38 ರನ್ ಗಳಿಸಿ ಪರವಾಗಿಲ್ಲ ಅನ್ನಿಸಿಕೊಂಡರು. ಧ್ರುವ ಜೂರೆಲ್ 22 ರನ್ ಗಳಿಸಿದರು. ಮಿಕ್ಕ ಆಟಗಾರರಿಂದ ಉತ್ತಮ ಆಟ ಹೊರಹೊಮ್ಮಲಿಲ್ಲ.

178 ರನ್‍ಗಳ ಟಾರ್ಗೆಟ್ ಬೆನ್ನತ್ತಿದ ಬಾಂಗ್ಲಾಗೆ ಉತ್ತಮ ಆರಂಭ ದೊರೆಯಿತು. ಓಪೆನರ್‍ಗಳಾದ ಫರ್ವೇಜ್ ಹುಸ್ಸೇನ್, ಹಸನ್ 50 ರನ್‍ಗಳ ಜೊತೆಯಾಟ ನೀಡಿದರು. ಇಮಾಮ್ 47 ರನ್ ಗಳಿಸಿ ಮಿಂಚಿದರು. ನಾಯಕ ಅಕ್ಬರ್ ಅಲಿ 43 ರನ್ ಗಳಿಸಿ ಅಜೇಯವಾಗಿ ಉಳಿದು ತಂಡವನ್ನು ಗೆಲುವಿನ ದಡ ಸೇರಿಸಿದರು. ಇದರೊಂದಿಗೆ ಮೊದಲ ಬಾರಿಗೆ ಬಾಂಗ್ಲಾ ದೇಶ ಅಂಡರ್ 19 ವಿಶ್ವಕಪ್ ಎತ್ತಿ ಹಿಡಿಯಿತು. ಬಾಂಗ್ಲಾ ಅಭಿಮಾನಿಗಳು ಹುಚ್ಚೆದ್ದು ಕುಣಿದರೆ, ಟೀಂ ಇಂಡಿಯಾ ಅಭಿಮಾನಿಗಳು ತೀವ್ರ ನಿರಾಸೆ ಅನುಭವಿಸಿದರು.

LEAVE A REPLY

Please enter your comment!
Please enter your name here