ʼಭೂಮಿ ಚಪ್ಪಟೆʼ ಎಂಬ ಪ್ರತಿಪಾದನೆಯ ಮ್ಯಾಡ್‌ ಮೈಕ್‌ ರಾಕೆಟ್‌ ಅಪಘಾತದಲ್ಲಿ ಮೃತ್ಯು

ಭೂಮಿ ಚಪ್ಪಟೆಯಾಗಿದೆ ಎಂದು ನಿರೂಪಿಸಲು ಅಮೇರಿಕನ್ ಬಾಹ್ಯಾಕಾಶ ತಜ್ಞ ಮೈಕೆಲ್ ತಾವೇ ನಿರ್ಮಿಸಿದ ರಾಕೆಟ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

64 ರ ಹರೆಯದ ಮ್ಯಾಡ್ ಮೈಕ್ ತಾವೇ ನಿರ್ಮಿಸಿದ ರಾಕೆಟ್ ಉಡಾಯಿಸುವ ಪ್ರಯತ್ನದಲ್ಲಿ ಸಾವನ್ನಪ್ಪಿದ್ದಾರೆ. ವೃತ್ತಿಯಲ್ಲಿ ಸ್ಟಂಟ್ ಮನ್ ಆಗಿರುವ ಮೈಕೆಲ್ ಹಗ್ಸ್ ಹಬೆ ಚಾಲಿತ ರಾಕೆಟ್ ನ್ನು ಉಡಾಯಿಸುವ ಪ್ರಯತ್ನದಲ್ಲಿದ್ದರು.

ಕ್ಯಾಲಿಫೋರ್ನಿಯಾದ ಬರೊಸ್ಟೊದಲ್ಲಿನ ತಮ್ಮ ನಿವಾಸದಲ್ಲಿಯೇ ಅಭಿವೃದ್ಧಿಪಡಿಸಿದ್ದ ಈ ರಾಕೆಟ್ ಅನ್ನು ಭೂಮಿ ವೃತ್ತಾಕಾರವಾಗಿಲ್ಲ ಬದಲಾಗಿ ಚಪ್ಪಟೆಯಾಗಿದೆ ಎಂದು ನಿರೂಪಿಸುವ ಸಲುವಾಗಿ ರಾಕೆಟ್ ನ್ನು ಸಾವಿರ 1500 ಮೀಟರ್ ಎತ್ತರಕ್ಕೆ ಚಿಮ್ಮಿಸುವುದು  ಇವರ ಯೋಜನೆಯಾಗಿತ್ತು.

ಶನಿವಾರ ನಡೆದ ಈ ಘಟನೆಯ ಸಂದರ್ಭದಲ್ಲಿ ಮರುಭೂಮಿಯಲ್ಲಿ ರಾಕೆಟ್ ಉಡಾವಣೆ ಯಾಗುವ ಭಯಾನಕ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.

ಉಡಾವಣೆಯ ಸಂದರ್ಭದಲ್ಲಿ ರಾಕೆಟ್‌ ಮೇಲಕ್ಕೆ ಚಿಮ್ಮುತ್ತಿದ್ದಂತೆಯೇ ಮೈಕೆಲ್‌  ರಾಕೆಟ್ ನಲ್ಲಿದ್ದ ಇತರ ಮೂರು ಪ್ಯಾರಚೂಟ್‌ ಗಳನ್ನು ಬಿಡುಗಡೆ ಮಾಡಿರಲಿಲ್ಲ. ತಕ್ಷಣವೇ ಪ್ಯಾರಚೂಟ್‌ ರಾಕೆಟ್ ನಿಂದ ಹರಿದಿದ್ದು ,ತಕ್ಷಣವೇ ಉಡಾವಣೆ ಸ್ಥಳದಿಂದ ಸುಮಾರು ದೂರಕ್ಕೆ ಬಾಹ್ಯಾಕಾಶ ನೌಕೆ ಎಸೆಯಲ್ಲಟ್ಟಿದೆ.

 

LEAVE A REPLY

Please enter your comment!
Please enter your name here