ʼಏನ್‌ ಸಮಾಚಾರʼ ಎಂದ ಟ್ವಿಟ್ಟರ್‌ ಇಂಡಿಯಾ

ಟ್ವಿಟ್ಟರ್‌ ಇಂಡಿಯಾದ ಅಧಿಕೃತ ಖಾತೆಯಿಂದ ಫೆಬ್ರವರಿ 18 ರಂದು ಕನ್ನಡದಲ್ಲಿ ʼಏನ್‌ ಸಮಾಚಾರʼ ಎಂದು ಟ್ಟೀಟ್‌ ಮಾಡಲಾಗಿತ್ತು. ಈ ಟ್ವೀಟನ್ನು ನೋಡಿ ಕನ್ನಡಿಗರು ಸಂಭ್ರಮಪಟ್ಟ ಕನ್ನಡಿಗರು ಈ ರೀತಿ ಉತ್ತರಿಸಿದ್ದಾರೆ.

ಟ್ವಿಟ್ಟರ್‌ ಇಂಡಿಯಾದ ʼಏನ್‌ ಸಮಾಚಾರʼ ಟ್ವೀಟ್‌ ಇದೀಗ ಭಾರೀ ವೈರಲ್‌ ಆಗಿದ್ದು,1000 ಕ್ಕೂ ಹೆಚ್ಚು ಬಾರಿ ರಿಟ್ವೀಟ್‌ ಆಗಿದ್ದು, 9,000 ಕ್ಕೂ ಅಧಿಕ ಮಂದಿ ಮೆಚ್ಚಿದ್ದಾರೆ.

ಟ್ವಿಟ್ಟರ್‌ ಬಳಕೆದಾರರ ಉತ್ತರ ಹೀಗಿತ್ತು :

ಏನ್‌ ಸಮಾಚಾರ ಎಂದು ಟ್ವೀಟ್‌ ಮಾಡಿದ ಟ್ವಿಟ್ಟರ್‌ ಇಂಡಿಯಾಕ್ಕೆ ಟ್ವೀಟರ್‌ ಬಳಕೆದಾರರು ಬಗೆ ಬಗೆಯ ಉತ್ತರಗಳನ್ನೇ ನೀಡಿದ್ದಾರೆ.

“ಊಟ ಆಯ್ತಾ”, ಎಂದು ಒಬ್ಬರು ಉತ್ತರ ನೀಡಿದ್ದರೆ, ಇನ್ನೊಬ್ಬರು “ಕನ್ನಡದಲ್ಲಿ ಟ್ವೀಟ್‌ ಮಾಡಿದ ನಿಮಗೆ ಶ್ಯಾವಿಗೆ ಪಾಯಸ ಕುಡಿಸುತ್ತೇವೆ” ಎಂದು ಹೇಳಿದ್ದಾರೆ. ಮತ್ತೊಬ್ಬ ಟ್ವೀಟಿಗರಂತೂ “ವಿದ್ಯಾರ್ಥಿ ಭವನದಲ್ಲಿ ನಿಮಗೆ ದೋಸೆ ಕೊಡಿಸುತ್ತೇವೆ” ಎಂದು ಉತ್ತರಿಸಿದ್ದಾರೆ.

ಕೆಲವರು ದೇಶದ ಆರ್ಥಿಕ ಪರಿಸ್ಥಿತಿ, ರಾಜಕೀಯ, ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಇನ್ನೊಬ್ಬರು ಕನ್ನಡದವರಿಗೆಲ್ಲೋ ಕೆಲಸ ಕೊಟ್ಟಂತಿದೆ ಎಂದು ಹೇಳಿದ್ದಾರೆ.

ಸದ್ಯಕ್ಕೆ ಈ ಪ್ರತಿಕ್ರಿಯೆಗಳಿಗೆ ಟ್ವಿಟ್ಟರ್‌ ಸಕಾರಾತ್ಮಕವಾಗಿ ಸ್ಪಂದಿಸಿಲ್ಲವಾದರೂ, ಅಪ್ಪಟ ಕನ್ನಡದಲ್ಲಿರುವ ಈ ಟ್ವೀಟನ್ನು ನೋಡಿ ಕನ್ನಡಿಗರಂತೂ‌ ಸಂಭ್ರಮಿಸಿದ್ದಾರೆ.

 

LEAVE A REPLY

Please enter your comment!
Please enter your name here